ಮಕ್ಕಾ : ಮಕ್ಕಳಿಗೆ ಸಿಹಿ ತಿನ್ನಿಸಿ ಈದ್‌ ಸಂಭ್ರಮ ಹಂಚಿಕೊಂಡ ಯುಟಿ ಖಾದರ್

Update: 2022-05-02 17:28 GMT

ಮಕ್ಕಾ/ಸೌದಿ ಅರೇಬಿಯಾ:  ಮಾಜಿ  ಸಚಿವ, ವಿಧಾನ ಸಭೆಯಲ್ಲಿ ವಿಪಕ್ಷ ಉಪ ನಾಯಕ ಯುಟಿ ಖಾದರ್ ಅವರು ಈದುಲ್ ಫಿತ್ರ್ ದಿನದಂದು ಮಕ್ಕಾದ ಪವಿತ್ರ‌ ಮಸ್ಜಿದುಲ್‌ ಹರಾಮ್‌ನಲ್ಲಿ ಮಕ್ಕಳಿಗೆ ಚಾಕೋಲೆಟ್ ಹಂಚುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಸೌದಿ ಅರೇಬಿಯಾದಲ್ಲಿ ಸೋಮವಾರ ಈದ್ ಆಚರಿಸಲಾಗಿದೆ.

ರಮಝಾನ್‌ ಮಾಸದಲ್ಲಿ  ಉಮ್ರಾ ಯಾತ್ರೆ ಕೈಗೊಂಡಿರುವ ಯುಟಿ ಖಾದರ್ ಅವರು ಮಕ್ಕಾದಲ್ಲಿ ಈದುಲ್ ಫಿತ್ರ್ ಪ್ರಾರ್ಥನೆ ಸಲ್ಲಿಸಿ,  ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಪ್ರಾರ್ಥನೆಯ ನಂತರ ಮಸೀದಿ ಆವರಣದಲ್ಲಿ ಮಕ್ಕಳಿಗೆ ಚಾಕೋಲೆಟ್ ವಿತರಿಸಿದರು ಹಾಗೂ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಕರಾವಳಿ ಕರ್ನಾಟಕದ ಅನಿವಾಸಿ ಕನ್ನಡಿಗರನ್ನು ಭೇಟಿ ಮಾಡಿ ಈದ್ ಶುಭಾಶಯ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News