ಪತ್ರಕರ್ತ ಅಮನ್ ಚೋಪ್ರಾರನ್ನು ಬಂಧಿಸದಂತೆ ಪೊಲೀಸರಿಗೆ ರಾಜಸ್ಥಾನ ಹೈಕೋರ್ಟ್ ಆದೇಶ
ಹೊಸದಿಲ್ಲಿ: ಪತ್ರಕರ್ತ ಅಮನ್ ಚೋಪ್ರಾ ಅವರನ್ನು ಬಂಧಿಸದಂತೆ ರಾಜಸ್ಥಾನ ಹೈಕೋರ್ಟ್ ರವಿವಾರ ಪೊಲೀಸರಿಗೆ ಆದೇಶ ನೀಡಿದೆ ಎಂದು firsrpost.com ವರದಿ ಮಾಡಿದೆ. 300 ವರ್ಷಗಳ ಹಳೆಯ ಆಳ್ವಾರ್ ದೇವಾಲಯದ ಧ್ವಂಸ ವಿಚಾರಕ್ಕೆ ಸಂಬಂಧಿಸಿದಂತೆ ಚೋಪ್ರಾ ಕಾರ್ಯಕ್ರಮ ಆರೋಪಿತ ದ್ವೇಷಪೂರಿತ ಕಾರ್ಯಕ್ರಮ ಅವತರಣೆ ಮಾಡಿದ ನಂತರ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು.
ಪಿಟಿಐ ಪ್ರಕಾರ, ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಚೋಪ್ರಾರನ್ನು ಬಂಧಿಸಲು ರಾಜಸ್ಥಾನ ಪೊಲೀಸರ ತಂಡ ಉತ್ತರ ಪ್ರದೇಶದ ನೋಯ್ಡಾದಲ್ಲಿದೆ ಎಂದು ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದರು.
ಖ್ಯಾತ ವಕೀಲರು ಮತ್ತು ಬಿಜೆಪಿ ನಾಯಕರು ರಾಜಸ್ಥಾನ ಸರ್ಕಾರವು ಪತ್ರಕರ್ತರನ್ನು ಬೆದರಿಸುತ್ತಿದೆ ಮತ್ತು ಪತ್ರಿಕೆಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.
ಡುಂಗರ್‌ಪುರ ಕೊಟ್ವಾಲಿ ಪೊಲೀಸ್ ಠಾಣೆಯ ಪ್ರಕಾರ, ಅಲ್ವಾರ್ ಜಿಲ್ಲೆಯ ರಾಜ್‌ಗಢ್‌ನಲ್ಲಿ ದೇವಾಲಯವನ್ನು ಕೆಡವಿರುವುದನ್ನು ರಾಜಸ್ಥಾನ ಸರ್ಕಾರವು ಸೇಡಿನ ಕ್ರಮವಾಗಿ ಮಾಡಿದೆ ಎಂದು ನಿರೂಪಿಸುವ ಮೂಲಕ ಪತ್ರಕರ್ತ ಸುಳ್ಳು ಮತ್ತು ಕಾಲ್ಪನಿಕ ವಿವರಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಅಮನ್ ಚೋಪ್ರಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.