ಅಜ್ಮಾನ್ : ತುಂಬೆ ಮೆಡಿಸಿಟಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ
ಅಜ್ಮಾನ್ : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಜ್ಮಾನ್ ನಲ್ಲಿರುವ ತುಂಬೆ ಮೆಡಿಸಿಟಿಗೆ ರವಿವಾರ ಭೇಟಿ ನೀಡಿದರು.
ತುಂಬೆ ಮೆಡಿಸಿಟಿ ಅಧ್ಯಕ್ಷ ಹಾಗೂ ಸ್ಥಾಪಕ ಡಾ. ತುಂಬೆ ಮೊಯ್ದಿನ್ ಯಡಿಯೂರಪ್ಪ ಅವರನ್ನು ಬರಮಾಡಿ ಕೊಂಡರು. ತುಂಬೆ ಮೆಡಿಸಿಟಿಯಲ್ಲಿ ಒದಗಿಸುವ ಮೂಲಸೌಕರ್ಯದಿಂದ ಪ್ರಭಾವಿತರಾದ ಯಡಿಯೂರಪ್ಪ ಅವರು ತುಂಬೆ ಮೊಯ್ದಿನ್ ಅವರನ್ನು ಅಭಿನಂದಿಸಿದರು.
‘‘ಇದು ನಾನು ಈ ವಲಯದಲ್ಲಿ ಭೇಟಿ ನೀಡಿದ ಅತ್ಯುತ್ತಮ ಖಾಸಗಿ ವೈದ್ಯಕೀಯ ವಿಶ್ವವಿದ್ಯಾನಿಲಯ. ಶಿಕ್ಷಣ ಹಾಗೂ ಆರೋಗ್ಯ ಪಾಲನೆಯಲ್ಲಿ ಉತ್ಕೃಷ್ಟತೆಯೊಂದಿಗೆ ಯುಎಇಗೆ ಸೇವೆ ನೀಡುವ ಅತ್ಯಾಧುನಿಕ ಸಂಸ್ಥೆಗಳನ್ನು ನೀಡಿದ ಡಾ. ತುಂಬೆ ಮೊಯ್ದಿನ್ ಅವರ ಬಗ್ಗೆ ಹೆಮ್ಮೆ ಪಡುತ್ತೇನೆ’’ ಎಂದು ಯಡಿಯೂರಪ್ಪ ಹೇಳಿದರು.
ಮನಸ್ಸಿನಲ್ಲಿ ಉದಾತ್ತ ಧ್ಯೇಯ ಇಟ್ಟುಕೊಂಡ ಕರ್ನಾಟಕದ ಓರ್ವ ಸರಳ ವ್ಯಕ್ತಿ ಸಮಾಜದ ಹಾಗೂ ದೇಶದ ಭವಿಷ್ಯವನ್ನು ನಿರ್ಮಿಸಲು ನಿಜವಾದ ಶಕ್ತಿಯಾಗಿರುವ ಶಿಕ್ಷಣವನ್ನು ನೀಡುವ ಮೂಲಕ ಈ ಸುಪ್ರಸಿದ್ಧ ದೇಶದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.