ಅಸ್ವಸ್ಥಗೊಂಡ ಪೈಲಟ್‌; ನಿಯಂತ್ರಕರ ಸಹಾಯದಿಂದ ಸುರಕ್ಷಿತವಾಗಿ ವಿಮಾನವನ್ನು ಕೆಳಗಿಳಿಸಿದ ಪ್ರಯಾಣಿಕ

Update: 2022-05-12 05:58 GMT
Photo: Twitter/@wpbf_ari

ಫ್ಲೋರಿಡಾ: ಸಿನಿಮೀಯ ಶೈಲಿಯ ಘಟನೆಯೊಂದರಲ್ಲಿ ಸಣ್ಣ ವಿಮಾನ(plane)ವೊಂದನ್ನು ಹಾರಾಟ ನಡೆಸುತ್ತಿದ್ದ ಪೈಲಟ್‌(pilot) ಒಬ್ಬರು ಹಾರಾಟದ ಮಧ್ಯದಲ್ಲಿಯೇ ಅಸ್ವಸ್ಥರಾದಾಗ ಆ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ವಿಮಾನ ಹಾರಾಟದ ಯಾವುದೇ ಅನುಭವವಿಲ್ಲದೇ ಇದ್ದರೂ ಏರ್‌ ಟ್ರಾಫಿಕ್‌ ನಿಯಂತ್ರಕರ ಸಹಾಯದಿಂದ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ ಘಟನೆ ವರದಿಯಾಗಿದೆ.

"ಇಲ್ಲೊಂದು ಗಂಭೀರ ಪರಿಸ್ಥಿತಿ ಎದುರಾಗಿದೆ. ಪೈಲಟ್‌ ಅಸ್ವಸ್ಥಗೊಂಡಿದ್ದಾರೆ. ವಿಮಾನ ಹೇಗೆ ಹಾರಾಟ ನಡೆಸಬೇಕೆಂದು ನನಗೆ ತಿಳಿದಿಲ್ಲ," ಎಂದು ಪ್ರಯಾಣಿಕ ಹೇಳುತ್ತಿರುವುದು ಏರ್‌ ಟ್ರಾಫಿಕ್‌ ಕಂಟ್ರೋಲರ್‌(air traffic controller) ಸಂವಹನಗಳನ್ನು ಪ್ರಸಾರ ಮಾಡುವ ಲೈವ್‌ ಎಟಿಸಿ.ನೆಟ್‌ನಲ್ಲಿ ಕೇಳಿಸುತ್ತದೆ.

ಆ ಸಿಂಗಲ್‌ ಇಂಜಿನ್‌ ಸೆಸ್ನಾ 280 ಕುರಿತು ನಿಯಂತ್ರಕರು ಕೇಳಿದಾಗ ಫ್ಲೋರಿಡಾ ಕಡಲ ತೀರ ಕಾಣಿಸುತ್ತದೆ ಎಂದು ಆತ ಹೇಳಿದ್ದಾರೆ.

ವಿಮಾನದಲ್ಲಿ ಪೈಲಟ್‌ ಮತ್ತು ಇತರ ಇಬ್ಬರು ಪ್ರಯಾಣಿಕರಿದ್ದರು. ಫ್ಲೋರಿಡಾದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನದ ಪ್ರಯಾಣಿಕರಿಗೆ ನಿಯಂತ್ರಕ ಕ್ರಿಸ್ಟೋಫರ್‌ ಫ್ಲೋರೆಸ್‌ ಮಾರ್ಗದರ್ಶನ ನೀಡಿದರು. ʻʻವಿಂಗ್‌ ಲೆವೆಲ್‌ ಕಾಪಾಡಿಕೊಳ್ಳಿ, ಕರಾವಳಿ ತೀರದಲ್ಲಿಯೇ ಸಾಗಿ ಎಂದು ಸಂದೇಶ ನೀಡಲಾಯಿತು. ಪ್ಯಾಸೆಂಜರ್‌ ಸೀಟಿನಿಂದಲೂ ಸೆಸ್ಸ್ನಾ 280 ವಿಮಾನವನ್ನು ನಿಯಂತ್ರಿಸುವ ಟ್ವಿನ್‌ ಕಂಟ್ರೋಲ್‌ ಇದೆ.

ನಂತರ ಇನ್ನೊಬ್ಬ ಏರ್‌ ಟ್ರಾಫಿಕ್‌ ನಿಯಂತ್ರಕರಾದ ರಾಬರ್ಟ್‌ ಮೋರ್ಗನ್‌ ಅವರು ವಿಮಾನ ಹಾರಾಟ ನಡೆಸುತ್ತಿದ್ದ ಪ್ರಯಾಣಿಕನಿಗೆ ಮಾರ್ಗದರ್ಶನ ನೀಡಿದ ಪರಿಣಾಮ ವಿಮಾನ ಸುರಕ್ಷಿತವಾಗಿ  ತನ್ನ ಸ್ಥಾನದಲ್ಲಿ ಭೂಸ್ಪರ್ಶ ಮಾಡಿದೆ.

ತಕ್ಷಣ ಪೈಲಟ್‌ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಇದನ್ನೂ ಓದಿ: ಟೇಕಾಫ್ ಆಗುವ ವೇಳೆ ರನ್‌ವೇಯಲ್ಲಿ ಚೀನಾದ ವಿಮಾನಕ್ಕೆ ಬೆಂಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News