ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ

Update: 2022-05-16 16:22 GMT

ಶಂಕರನಾರಾಯಣ, ಮೇ ೧೬: ಆರ್ಥಿಕ ಅಡಚಣೆಯಿಂದ ಮನನೊಂದ ಕುಳ್ಳುಂಜೆ ಗ್ರಾಮದ ಕಲ್ಲು ಬಚ್ಚಲು ನಿವಾಸಿ ಕರುಣಾಕರ ಶೆಟ್ಟಿ(೪೯) ಎಂಬವರು ಮೇ೧೫ರಂದು ಸಂಜೆ ವೇಳೆ ಮನೆ ಸಮೀಪ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಜೆಕಾರು: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಅಂಡಾರು ಗ್ರಾಮದ ಮುಟ್ಲುಪಾಡಿ ಶಾಲೆಯ ಬಳಿ ನಿವಾಸಿ ವಸಂತಿ ಎಂಬವರ ಮಗಳು ಸುಜಾತ (29) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮೇ ೧೫ರಂದು ಸಂಜೆ ವೇಳೆ ಮನೆಯ ಕೋಣೆಯಲ್ಲಿನ ಮರದ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಂಕರನಾರಾಯಣ: ಬೆಳ್ವೆ ಗ್ರಾಮದ ಗುಮ್ಮೊಲ ಎಂಬಲ್ಲಿನ ಜೋಸೆಫ್ ಎಂಬವರ ತೋಟದ ಮನೆಯಲ್ಲಿ ಶಂಕ್ರವ್ವ ತೇರದಳ್ಳಿ ಎಂಬವರ ಮಗ ಜಗದೀಶ ತೆರದಳ್ಳಿ (೩೬) ಎಂಬವರು ಮೇ ೧೫ರಂದು ಸಂಜೆ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News