ಉಡುಪಿ: ಅಂಬುಲೆನ್ಸ್ ನಲ್ಲಿ ದಿಢೀರ್ ಬೆಂಕಿ

Update: 2022-05-16 16:26 GMT

ಉಡುಪಿ, ಮೇ ೧೬: ನಗರದ ಕಲ್ಸಂಕ ಜಂಕ್ಷನ್‌ನಲ್ಲಿ ಸಾಗುತ್ತಿದ್ದ ಅಂಬ್ಯುಲೆನ್ಸ್ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡ ಘಟನೆ ಮೇ ೧೬ರಂದು ರಾತ್ರಿ ವೇಳೆ ನಡೆದಿದೆ.

ಉಡುಪಿಯಿಂದ ಮಣಿಪಾಲ ಕಡೆ ಸಾಗುತ್ತಿದ್ದ ಓಮ್ನಿ ಕಾರಿನ ಖಾಸಗಿ ಅಂಬುಲೆನ್ಸ್ ಕಲ್ಸಂಕ ಜಂಕ್ಷನ್‌ನಲ್ಲಿ ಟ್ರಾಫಿಕ್ ಕಾರಣಕ್ಕೆ ನಿಂತಿತ್ತು. ಆ ವೇಳೆ ಕಾರಿನ ಬ್ಯಾಟರಿ ಯಲ್ಲಿ ಶಾರ್ಟ್ ಸರ್ಕಿಟ್ ಆಗಿ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿ ಕೊಂಡಿತ್ತೆನ್ನಲಾಗಿದೆ. ಇದರಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಠಿಯಾಯಿತು.

ಕೂಡಲೇ ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ದಳದವರು ಬೆಂಕಿ ನಂದಿ ಸುವಲ್ಲಿ ಯಶಸ್ವಿಯಾದರು. ಇದರಿಂದ ಕಾರು ಭಾಗಶಃ ಸುಟ್ಟುಹೋಗಿ ಅಪಾರ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News