ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ: ವಿದ್ಯಾರ್ಥಿಗಳ ಸಾಧನೆ

Update: 2022-05-25 13:51 GMT

ಉಡುಪಿ : ಬಡೋಕಾನ್ ಕರಾಟೆ ಆ್ಯಂಡ್ ಸ್ಪೋರ್ಟ್ಸ್ ಅಸೋಸಿ ಯೇಶನ್ ಉಡುಪಿ ಇದರ ವತಿಯಿಂದ ನಡೆಸಿದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಯಲ್ಲಿ ಜಪಾನ್ ಕೊಟೊಕಾನ್ ಕರಾಟೆ ಡು ಕನ್ನಿಂಜುಕು ಆರ್ಗನೈಝೇಶನ್ ಇಂಡಿಯಾ ಇದರ ವಿದ್ಯಾರ್ಥಿಗಳು 17 ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಕುಂದಾಪುರ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್‌ನ ಆಝಮ್ ಖಾನ್ ಒಂದು ಚಿನ್ನ, ಮುಹಮ್ಮದ್ ಫರಾನ್ ಒಂದು ಬೆಳ್ಳಿ, ಮುಹಮ್ಮದ್ ಅಕ್ಮಲ್ ಜುನೈದ್ ಒಂದು ಕಂಚು, ಕಟಪಾಡಿ ಎಸ್‌ವಿಎಸ್ ಆಂಗ್ಲ ಮಾಧ್ಯಮ ಶಾಲೆಯ ಚಿರಾಗ್ ಮೆಂಡನ್ ಒಂದು ಬೆಳ್ಳಿ, ಒಂದು ಕಂಚು, ತನುಷ್ ಪೂಜಾರಿ ಒಂದು ಬೆಳ್ಳಿ, ಕಾಪು ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆಯ ಫಾತಿಮಾ ಸದ್ಧಾಪ್ ಒಂದು ಕಂಚು, ಮುಹಮ್ಮದ್ ಸಿಮಕ್ ಹುಸೇನ್ ಒಂದು ಕಂಚು, ಮುಹಮ್ಮದ್ ಅಶ್ಮಲ್ ಒಂದು ಕಂಚು, ಮುಹಮ್ಮದ್ ಇಹಾನ್ ಒಂದು ಕಂಚು, ಅಬ್ದುಲ್ ಹನಾನ್ ಒಂದು ಕಂಚು, ಚಂದ್ರನಗರದ ಕ್ರೆಸೆಂಟ್ ಇಂಟರ್‌ನ್ಯಾಶ ನಲ್ ಸ್ಕೂಲ್‌ನ ಮುಹಮ್ಮದ್ ಅದ್ನಾನ್ ಎರಡು ಕಂಚು, ಮುಹಮ್ಮದ್ ಸಯೀದ್ ಒಂದು ಕಂಚು, ಅಯ್ಮನ್ ಅಹ್ಮದ್ ಒಂದು ಕಂಚು, ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ಮುಹಮ್ಮದ್ ಅಯಾನ್ ಒಂದು ಕಂಚು, ನಿತಿನ್ ಶೆಟ್ಟಿ ಒಂದು ಕಂಚು ಗೆದ್ದಿದ್ದಾರೆ.

ಈ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಮುಖ್ಯ ಪರೀಕ್ಷಕ ಮತ್ತು ಮುಖ್ಯ ಶಿಕ್ಷಕ ಶಂಶುದ್ದೀನ್ ಎಚ್.ಶೇಕ್ ಕಾಪು ಇವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News