ಉಡುಪಿ ರೈತ ಉತ್ಪಾದಕ ಕಂಪೆನಿಯ ಸಭೆ
ಉಡುಪಿ : ಕೃಷಿ ಉತ್ತೇಜನ ಕಾರ್ಯಕ್ರಮಗಳನ್ನು ರೈತ ಉತ್ಪಾದಕ ಕಂಪೆನಿಗಳ ಮೂಲಕ ಅನುಷ್ಠಾನಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡ ಬೇಕೆಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿ ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಹಾಗೂ ಸ್ಕೋಡ್ ವೆಸ್ ಸಂಸ್ಥೆಯ ಸಹಯೋಗದಲ್ಲಿ ರಚಿತವಾಗಿರುವ ಉಡುಪಿ ತಾಲೂಕಿನ ಕೇದಾರೋತ್ಥಾನ ರೈತ ಉತ್ಪಾದಕ ಕಂಪೆನಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಬುಧವಾರ ಮಾತನಾಡುತಿದ್ದರು.
ಕೃಷಿ ಉತ್ಪನ್ನಗಳಿಗೆ ಕೇದಾರೋತ್ಥಾನ ರೈತ ಉತ್ಪಾದಕ ಕಂಪೆನಿಯಿಂದ ಉತ್ತೇಜನದ ಜೊತೆಗೆ ಮಾರುಕಟ್ಟೆ ಕಲ್ಪಿಸಿ ರೈತರಿಗೆ ಲಾಭದಾಯಕ ಕೃಷಿಯಾಗಿ ಪರಿವರ್ತಿಸುವಲ್ಲಿ ರೈತ ಉತ್ಪಾದಕ ಕಂಪೆನಿಯ ಪಾತ್ರ ಮಹತ್ವ ದ್ದಾಗಿದೆ. ಈ ಎಲ್ಲರು ಶ್ರಮ ವಹಿಸಬೇಕು ಎಂದು ಅವರು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ಕಂಪೆಗೌಡ ರೈತ ಉತ್ಪಾದಕ ಕಂಪೆನಿಯ ರೂಪು ರೇಷೆಗಳು ಹಾಗೂ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಮೋಹನ್‌ರಾಜ್, ಕಂಪೆನಿ ನಿರ್ದೇಶಕ ಹಾಗೂ ಸ್ಕೋಡ್‌ವೆಸ್ ಸಂಸ್ಥೆಯ ಸಂಯೋಜನಾಧಿಕಾರಿ ಸೂರಜ್ ಶೆಟ್ಟಿ ಮೊದ ಲಾದವರು ಉಪಸ್ಥಿತರಿದ್ದರು.