ಜೂ.4ರಂದು ಉಡುಪಿ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ

Update: 2022-05-27 13:41 GMT

ಉಡುಪಿ, ಮೇ ೨೭: ಜಂಯಟ್ಸ್ ಗ್ರೂಪ್ ಉಡುಪಿ ಮತ್ತು ಇನಾಯತ್ ಆರ್ಟ್ ಗ್ಯಾಲರಿ ಉಡುಪಿ ಇವರ ಆಶ್ರಯ ದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಉಡುಪಿ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಜೂ.೪ರಂದು ಅಪರಾಹ್ನ ೨ಗಂಟೆಗೆ ಕುಂಜಿಬೆಟ್ಟು ವಿನಲ್ಲಿರುವ ಇನಾಯತ್ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಲಾಗಿದೆ.

ಎಲ್‌ಕೆಜಿ ಮತ್ತು ಯುಕೆಜಿ, ಒಂದನೆ ತರಗತಿಯಿಂದ ಮೂರು, ನಾಲ್ಕರಿಂದ ಆರು, ಏಳರಿಂದ ಒಂಭತ್ತು ಹಾಗೂ ೧೦ನೆ ತರಗತಿ ಮತ್ತು ಪಿಯುಸಿಯವರಿಗೆ ಒಟ್ಟು ಐದು ವಿಭಾಗಗಳಲ್ಲಿ ಮಣ್ಣಿನ ರಕ್ಷಣೆ ವಿಷಯದಲ್ಲಿ ಸ್ಪರ್ಧೆ ನಡೆಯಲಿದೆ. ಪ್ರತಿ ವಿಭಾಗದಲ್ಲಿ ಮೂರು ಬಹುಮಾನ ನೀಡಲಾಗುವುದು. ಅದೇ ದಿನಸಂಜೆ ೪.೩೦ಕ್ಕೆ ಮಣ್ಣಿನ ರಕ್ಷಣೆ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ಸಂಜೆ ೫ಗಂಟೆಗೆ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಲಿಯಾಕತ್ ಅಲಿ ನಿರ್ದೇಶಕರು, ಇನಾಯತ್ ಆರ್ಟ್ ಗ್ಯಾಲರಿ ಉಡುಪಿ (ಮೊ-೯೮೪೫೦೪೯೮೭೦, ೦೮೨೦-೨೫೨೨೭೩೧), ಇಕ್ಬಾಲ್ ಮನ್ನಾ, ಅಧ್ಯಕ್ಷರು, ಜಯಂಟ್ಸ್ ಗ್ರೂಪ್ ಉಡುಪಿ (ಮೊ-೯೮೮೦೬ ೬೪೬೮೦) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News