ಕೆಸಿಎಫ್ ಕತರ್‌ ಝೋನ್ ವಾರ್ಷಿಕ ಮಹಾ ಸಭೆ

Update: 2022-05-29 07:15 GMT

ದೋಹಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಕತರ್‌ ಅಧೀನದಲ್ಲಿರುವ 3 ಝೋನ್ ಗಳಾದ ದೋಹಾ ಝೋನ್, ಅಝೀಝಿಯ ಝೋನ್ ಹಾಗೂ ಮದೀನಾ ಖಲೀಫಾ ಝೋನ್ ಗಳ ಮಹಾ ಸಭೆಯು ಮೇ 27ರಂದು ದೋಹಾದ ವಿವಿಧ ಕೇಂದ್ರಗಳಲ್ಲಿ ನಡೆಯಿತು.

ದೋಹಾ ಝೋನ್ ವಾರ್ಷಿಕ ಮಹಾ ಸಭೆ

ಝೋನ್ ಅಧ್ಯಕ್ಷರಾದ ಯಹ್ಯಾ ಸಅದಿಯವರ ಅಧ್ಯಕ್ಷತೆಯಲ್ಲಿ ಜರಗಿದ ದೋಹಾ ಝೋನ್ ವಾರ್ಷಿಕ ಮಹಾ ಸಭೆಯನ್ನು ಮುಹಮ್ಮದ್ ತಲ್ಹತ್ ಅಸ್ಲಮಿ ಉದ್ಘಾಟಸಿದರು. ಈ ಸಂದರ್ಭ ಮಾತನಾಡಿದ  ಅಧ್ಯಕ್ಷರಾದ ಯಹ್ಯಾ ಸಅದಿ, ಕೆಸಿಎಫ್ ಕಾರ್ಯಕರ್ತರು ಹೇಗಿರಬೇಕು, ಅವರ ಕಾರ್ಯಾಚರಣೆ ಯಾವ ರೀತಿಯಲ್ಲಾಗಿರಬೇಕು ಎಂಬುದರ ಬಗ್ಗೆ ಮಾತನಾಡಿದರು.

ದೋಹಾ ಝೋನ್ ಪ್ರಧಾನ ಕಾರ್ಯದರ್ಶಿ ಹಾಶಿರ್ ಕೆಸಿ ರೋಡ್ 2021-22ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.

ನೂತನ ಸಮಿತಿಯ ರಚನೆಯ ನೇತೃತ್ವವನ್ನು ಚುಣಾವಣಾ ವೀಕ್ಷಕರಾಗಿ ಆಗಮಿಸಿದ್ದ ಹಾಫಿಳ್ ಉಮರುಲ್ ಫಾರೂಖ್ ಸಖಾಫಿ ಎಮ್ಮೆಮ್ಮಾಡು ಹಾಗೂ ಮುನೀರ್ ಮಾಗುಂಡಿ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಹಾಫಿಳ್ ಉಮರುಲ್ ಫಾರೂಖ್ ಸಖಾಫಿ ಕೆ.ಸಿ.ಎಫ್. ಮುಂದಿನ ದಿನಗಳಲ್ಲಿ ನಡೆಸಲ್ಪಡುವ ಕಾರ್ಯಚಟುವಟಿಕೆಯ ಬಗ್ಗೆ ವಿವರಿಸಿದರು.

ಸದ್ರಿ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. 

ಅಧ್ಯಕ್ಷರು -  ನಿಯಾಝ್ ಕುರ್ನಾಡ್
ಪ್ರಧಾನ ಕಾರ್ಯದರ್ಶಿ -  ಸದಕತುಲ್ಲಾ ಕೂಳುರು
ಕೋಶಾಧಿಕಾರಿ - ಅಬೂಬಕ್ಕರ್ ಪುತ್ತೂರು

ಸಂಘಟನಾ ವಿಭಾಗ
ಅಧ್ಯಕ್ಷರು   - ಝುಬೈರ್ ತುರ್ಕಳಿಕೆ
ಕಾರ್ಯದರ್ಶಿ   -  ಫಾರೂಖ್ ಜೆಪ್ಪು

ಶಿಕ್ಷಣ ವಿಭಾಗ
ಅಧ್ಯಕ್ಷರು   - ಆಸಿಫ್ ಅಹ್ಸನಿ ಅಲ್'ಅನ್ವಾರಿ
ಕಾರ್ಯದರ್ಶಿ   -  ಅಶ್ರಫ್ ಬೈರಿಕಟ್ಟೆ

ಆಡಳಿತ ಮತ್ತು ಕಚೇರಿ ವಿಭಾಗ
ಅಧ್ಯಕ್ಷರು   - ಹಾಶಿರ್ ಕೆ.ಸಿ.ರೋಡ್
ಕಾರ್ಯದರ್ಶಿ   -  ಹಸೈನಾರ್ ಕಾಟಿಪಳ್ಳ

ಸಾಂತ್ವನ ವಿಭಾಗ
ಅಧ್ಯಕ್ಷರು   - ಮುಸ್ತಫಾ ಕೃಷ್ಣಾಪುರ
ಕಾರ್ಯದರ್ಶಿ -  ಜಾಫರ್ ಕೆ.ಸಿ.ರೋಡ್

ಇಹ್ಸಾನ್ ವಿಭಾಗ
ಅಧ್ಯಕ್ಷರು   - ಕಲೀಲ್ ಉರುಮಣೆ
ಕಾರ್ಯದರ್ಶಿ  - ಜಲೀಲ್ ರೆಂಜಾಡಿ

ಪ್ರಕಾಶನ ವಿಭಾಗ
ಅಧ್ಯಕ್ಷರು   -  ಮುಹಮ್ಮದ್ ತಲ್ಹತ್  ಅಸ್ಲಮಿ ಪೆರ್ನೆ
ಕಾರ್ಯದರ್ಶಿ -  ಅಮೀರ್ ಮಲ್ಲೂರು ಹಾಗೂ 12 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಇದೇ ಸಂದರ್ಭ ಆಯ್ಕೆ ಮಾಡಲಾಯಿತು. 

ಕಾರ್ಯಕ್ರಮದಲ್ಲಿ ಕೆಸಿಎಫ್ ವಕ್ರ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಮುಹಮ್ಮದ್ ಅರ್ಶದ್ ಅಲಿ ಈಶ್ವರಮಂಗಳ, ಅಲ್'ಮದೀನ ಮಂಜನಾಡಿ ಕತರ್ ಸಮಿತಿಯ ಅಧ್ಯಕ್ಷರಾದ ಹಾಜಿ ಅರಬಿಚ್ಚ ಮುಡಿಪು ಹಾಗೂ ವಿವಿಧ ಸೆಕ್ಟರ್ ಗಳಿಂದ ಆಯ್ಕೆಯಾಗಿ ಬಂದ ಕೌನ್ಸಿಲರ್ ಗಳು ಉಪಸ್ಥಿತರಿದ್ದರು.

ದೋಹಾ ಝೋನ್ ಸಂಘಟನಾ ವಿಭಾಗ ಕನ್ವೀನರ್ ಹಸೈನಾರ್ ಕಾಟಿಪಳ್ಳ ಸ್ವಾಗತಿಸಿ, ಶಿಕ್ಷಣ ವಿಭಾಗದ ಕನ್ವೀನರ್ ಅಶ್ರಫ್ ಬೈರಿಕಟ್ಟೆ ವಂದಿಸಿದರು. ದೋಹಾ ಝೋನ್ ಕಂಟ್ರೋಲರ್ ಫಾರೂಖ್ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು.

ಅಝೀಝಿಯಾ ಝೋನ್ ವಾರ್ಷಿಕ ಮಹಾ ಸಭೆ

ಕೆಸಿಎಫ್ ಕತರ್ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗ ಕಾರ್ಯದರ್ಶಿ ಖಾಲಿದ್ ಹಿಮಾಮಿ ಬೋಳಂತೂರು ದುಆ ನೆರವೇರಿಸುವುದರ ಮೂಲಕ ಅಝೀಝಿಯಾ ಝೋನ್ ವಾರ್ಷಿಕ ಮಹಾ ಸಭೆಗೆ ಚಾಲನೆ ನೀಡಲಾಯಿತು.

ಝೋನ್ ಅಧ್ಯಕ್ಷರಾದ ನಸ್ರತುಲ್ಲಾ ಮಲ್ಪೆ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಅಬ್ಬಾಸ್ ಸಖಾಫಿ ಕೊಡಗು ಉದ್ಘಾಟಿಸಿದರು. ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗ ಅಧ್ಯಕ್ಷ  ಹನೀಫ್ ಪಾತೂರ್  ಸಂಘಟನೆಯ ಧ್ಯೇಯೋದ್ದೇಶಗಳ ಬಗ್ಗೆ ವಿವರಿಸಿದರು.

ಝೋನ್ ಪ್ರಧಾನ ಕಾರ್ಯದರ್ಶಿ ಇಮ್ರಾನ್ ಕೂಳೂರು 2021-22ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು. ನೂತನ ಸಮಿತಿ ರಚನೆಯ ನೇತೃತ್ವವನ್ನು ಚುಣಾವಣಾ ವೀಕ್ಷಕರಾಗಿ ಆಗಮಿಸಿದ್ದ ಹನೀಫ್ ಪಾತೂರ್ ಹಾಗೂ ಖಾಲಿದ್ ಹಿಮಾಮಿ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಖಾಲಿದ್ ಹಿಮಾಮಿ ಸಂಘಟನೆ ಮುಂದಿನ ದಿನಗಳಲ್ಲಿ ನಡೆಸಲ್ಪಡುವ ಕಾರ್ಯಚಟುವಟಿಕೆಯ ಬಗ್ಗೆ ವಿವರಿಸಿದರು.

ಸದ್ರಿ ಸಮಿತಿಯನ್ನು ವಿಸರ್ಜಿಸಿ, ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. 

ಅಧ್ಯಕ್ಷರು -   ಮುಹಮ್ಮದ್ ಅಲೀ ಕೊಡಗು
ಪ್ರಧಾನ ಕಾರ್ಯದರ್ಶಿ -  ಬಶೀರ್ ತೋಕೂರು
ಕೋಶಾಧಿಕಾರಿ - ನಸ್ರತುಲ್ಲಾ ಮಲ್ಪೆ

ಸಂಘಟನಾ ವಿಭಾಗ
ಅಧ್ಯಕ್ಷರು   - ಅಬ್ದುಲ್ ಖಾದರ್ ಪಾತೂರು 
ಕಾರ್ಯದರ್ಶಿ  -  ಇಮ್ರಾನ್ ಕೂಳೂರು

ಶಿಕ್ಷಣ ವಿಭಾಗ
ಅಧ್ಯಕ್ಷರು   - ಹಬೀಬ್ ಹಿಮಮಿ ನೀರಕಟ್ಟೆ 
ಕಾರ್ಯದರ್ಶಿ -  ಯಾಸೀನ್ ಕೋಟ

ಆಡಳಿತ ಮತ್ತು ಕಚೇರಿ ವಿಭಾಗ
ಅಧ್ಯಕ್ಷರು   - ಝಾಕಿರ್ ಚಿಕ್ಕಮಗಳೂರು
ಕಾರ್ಯದರ್ಶಿ  -  ಶರ್ಫುದ್ದೀನ್ ಕೆಸಿ ರೋಡ್

ಸಾಂತ್ವನ ವಿಭಾಗ
ಅಧ್ಯಕ್ಷರು  - ಜೀಲಾನಿ ಕೊಣಾಜೆ
ಕಾರ್ಯದರ್ಶಿ  -  ಅನಸ್ ಪುತ್ತೂರು

ಇಹ್ಸಾನ್ ವಿಭಾಗ
ಅಧ್ಯಕ್ಷರು   - ರಝ್ಝಾಖ್ ಮುಂಡ್ಕೂರ್
ಕಾರ್ಯದರ್ಶಿ   - ಫೈಝಲ್ ಕನ್ನಂಗಾರ್

ಪ್ರಕಾಶನ ವಿಭಾಗ
ಅಧ್ಯಕ್ಷರು   - ಅಬ್ದುಲ್ ರಹಿಮಾನ್ ಕೊಪ್ಪ
ಕಾರ್ಯದರ್ಶಿ   -  ಮಜೀದ್ ಕೆಸಿ ರೋಡ್

ಹಾಗೂ 12 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. 

ಕಾರ್ಯಕ್ರಮದಲ್ಲಿ ರಾಷ್ಟೀಯ ಸಮಿತಿಯ ನಾಯಕರಾದ ಇಕ್ಬಾಲ್ ಪುಂಜಾಲ್ಕಟ್ಟೆ, ಅಝೀಝಿಯಾ ಝೋನ್ ಕಂಟ್ರೋಲರ್ ಸಿದ್ದೀಖ್ ಕೃಷ್ಣಾಪುರ ಹಾಗೂ ವಿವಿಧ ಸೆಕ್ಟರ್ ಗಳಿಂದ ಆಯ್ಕೆಯಾಗಿ ಬಂದ ಕೌನ್ಸಿಲರ್ ಗಳು ಉಪಸ್ಥಿತರಿದ್ದರು.

ಅಝೀಝಿಯಾ ಝೋನ್ ಪ್ರಧಾನ ಕಾರ್ಯದರ್ಶಿ ಇಮ್ರಾನ್ ಕೂಳೂರು ಸ್ವಾಗತಿಸಿ, ನೂತನ  ಪ್ರಧಾನ ಕಾರ್ಯದರ್ಶಿ ಬಶೀರ್ ತೋಕೂರು ವಂದಿಸಿದರು. ಝೋನ್  ಕಂಟ್ರೋಲರ್  ಸಿದ್ದೀಕ್ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು.‌

ಮದೀನಾ ಖಲೀಫಾ ಝೋನ್ ವಾರ್ಷಿಕ ಮಹಾ ಸಭೆ

ಹಾಫಿಲ್ ಉಮರುಲ್ ಫಾರೂಖ್ ಸಖಾಫಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವು ಝೋನ್ ಅಧ್ಯಕ್ಷರಾದ ಮುಹಮ್ಮದ್ ಪೂಂಜಾಲಕಟ್ಟೆ ಅಧ್ಯಕ್ಷತೆಯಲ್ಲಿ ಜರುಗಿದ ಮದೀನಾ ಖಲೀಫಾ ಝೋನ್ ವಾರ್ಷಿಕ ಮಹಾ ಸಭೆಯನ್ನು ಕೆಸಿಎಫ್ ಕತರ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಹಂಡುಗುಳಿ ಉದ್ಘಾಟಿಸಿದರು. ಸಂಘಟನೆ ನಡೆಸಿದ ಜೀವ ಕಾರುಣ್ಯ ಚಟುವಟಿಕೆಗಳ ಕುರಿತು ಸವಿಸ್ತಾರವಾಗಿ ಮಾತನಾಡಿದ ಅವರು ಸಂಘಟನೆಯ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ವ ಸದಸ್ಯರೂ ಸಹಕರಿಸಲು ವಿನಂತಿಸಿದರು.

ಝೋನ್ ಕಂಟ್ರೋಲರ್ ಮಿರ್ಷಾದ್ ಕನ್ಯಾನ 2021 - 2022 ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಿದರು. ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಅಶ್ರಫಿ ಮಠ ಸಂಘಟನೆಯ ಧ್ಯೇಯೋದ್ದೇಶ ಹಾಗೂ ಅನಿವಾರ್ಯತೆಯ ಕುರಿತು ಮಾತನಾಡಿ, ನೂತನ ಸಾಲಿನ ಪದಾಧಿಕಾರಿಗಳ ರಚನೆಗೆ ನೇತೃತ್ವ ವಹಿಸಿದರು.

ಮುಹಮ್ಮದ್ ರಫೀಖ್ ಜೌಹರಿ ಅಳಿಕೆಯವರು ಪ್ರಾಸ್ತಾವಿಕ ಭಾಷಣ ಮಾಡುತ್ತಾ ನೈಜ ಸುನ್ನತ್ ಜಮಾಅತಿನ ತತ್ವಾದರ್ಶದಡಿಯಲ್ಲಿ ನೆಲೆಗೊಂಡು ಸಂಘಟನೆಯ ಬಲವರ್ಧನೆಗೆ ಶ್ರಮಿಸಲು ಕರೆಯಿತ್ತರು. 

ಸದ್ರಿ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. 

ಅಧ್ಯಕ್ಷರು - ಇಸ್ಹಾಖ್ ನಿಝಾಮಿ ಕೊಡ್ಲಿಪೇಟೆ
ಪ್ರಧಾನ ಕಾರ್ಯದರ್ಶಿ - ಮುಹಮ್ಮದ್ ಆಶಿಖ್ ಬೈರಿಕಟ್ಟೆ
ಕೋಶಾಧಿಕಾರಿ - ಕಬೀರ್ ಮಡಿಕೇರಿ 

ಸಂಘಟನಾ ವಿಭಾಗ

ಅಧ್ಯಕ್ಷರು   - ಮುಹಮ್ಮದ್ ರಫೀಖ್ ಜೌಹರಿ ಅಳಿಕೆ
ಕಾರ್ಯದರ್ಶಿ   - ಆಶಿಖ್ ಕೋಡಪದವು

ಶಿಕ್ಷಣ ವಿಭಾಗ
ಅಧ್ಯಕ್ಷರು   - ಅಬ್ದುಲ್ ಖಾದರ್ ಮುಸ್ಲಿಯಾರ್ ಸುನ್ನಂಗಳ
ಕಾರ್ಯದರ್ಶಿ   - ಆಸಿಫ್ ಕರ್ಪಾಡಿ

ಆಡಳಿತ ಮತ್ತು ಕಚೇರಿ ವಿಭಾಗ
ಅಧ್ಯಕ್ಷರು   - ನಿಝಾಮ್ ಸಅದಿ ಸೂರಿಕುಮೇರ್ 
ಕಾರ್ಯದರ್ಶಿ   -  ಶಫೀಖ್ ಉಜಿರೆ

ಸಾಂತ್ವನ ವಿಭಾಗ

ಅಧ್ಯಕ್ಷರು   - ಮುಹಮ್ಮದ್ ಕನಿಯಾಳ
ಕಾರ್ಯದರ್ಶಿ   - ಅಶ್ರಫ್ ಕಾಯಾರ್

ಇಹ್ಸಾನ್ ವಿಭಾಗ

ಅಧ್ಯಕ್ಷರು   - ಇಬ್ರಾಹಿಂ ಖಲೀಲ್ ಕೆ ಸಿ ರೋಡು

ಕಾರ್ಯದರ್ಶಿ   - ಅಶ್ರಫ್ ಕೊಡ್ಲಿಪೇಟೆ

ಪ್ರಕಾಶನ ವಿಭಾಗ

ಅಧ್ಯಕ್ಷರು   - ನಝೀರ್ ಮೂರ್ನಾಡ್
ಕಾರ್ಯದರ್ಶಿ   - ಗಫೂರ್ ಬಾಯಾರ್

ಹಾಗೂ 12 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೆಸಿಎಫ್ ಕತರ್ ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗ ಕಾರ್ಯದರ್ಶಿ ಹಸನ್ ಪುಂಜಾಲಕಟ್ಟೆ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದ ಅಶ್ರಫ್ ಕಾವಳಕಟ್ಟೆ ಹಾಗೂ ವಿವಿಧ ಸೆಕ್ಟರ್ ಗಳಿಂದ ಆಯ್ಕೆಯಾಗಿ ಬಂದ ಕೌನ್ಸಿಲರ್ ಗಳು ಉಪಸ್ಥಿತರಿದ್ದರು.‌

ನಝೀರ್ ಮೂರ್ನಾಡು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಝೋನ್ ನೂತನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆಶಿಖ್ ಬೈರಿಕಟ್ಟೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News