ಪುತ್ತೂರಿನ ಅಬ್ದುರಹ್ಮಾನ್ ಮದೀನಾದಲ್ಲಿ ನಿಧನ
ಮದೀನಾ : ವಿಸಿಟ್ ವೀಸಾದಲ್ಲಿದ್ದ ಪುತ್ತೂರಿನ ಕುಂಬ್ರ ನಿವಾಸಿ ಮದೀನಾ ಭೇಟಿ ವೇಳೆ ನಿಧನರಾಗಿದ್ದಾರೆ.
ಮೃತರನ್ನು ಪುತ್ತೂರಿನ ಕುಂಬ್ರ ನಿವಾಸಿ ಅಬ್ದುರಹ್ಮಾನ್ (72) ಎಂದು ಗುರುತಿಸಲಾಗಿದೆ. ಅವರು ಮದೀನಾಕ್ಕೆ ಭೇಟಿ ನೀಡಲು ಮತ್ತು ಉಮ್ರಾ ನಿರ್ವಹಿಸಲು ತಮ್ಮ ಮಗನೊಂದಿಗೆ ಜಿಝಾನ್‌ನಿಂದ ಹೊರಟಿದ್ದರು.
ಅವರು ಇಂಡಿಯನ್ ಕಲ್ಚರಲ್ ಫೌಂಡೇಶನ್ (ಐಸಿಎಫ್) ಜಿಝಾನ್ ಸೆಂಟ್ರಲ್ ಕಮಿಟಿ ಏರ್ಪಡಿಸಿದ್ದ ಬಸ್‌ನಲ್ಲಿ ಮದೀನಾಕ್ಕೆ ಪ್ರಯಾಣಿಸುತ್ತಿದ್ದರು. ಶುಕ್ರವಾರ ಜುಮಾದಲ್ಲಿ ಪಾಲ್ಗೊಂಡು ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ನಿಧನರಾದರು ಎಂದು ತಿಳಿದುಬಂದಿದೆ.
ಕೆಸಿಎಫ್ ಮದೀನಾ ಮುನವ್ವರ ಸೆಕ್ಟರ್ ನಾಯಕರಾದ ಅಬ್ದುಲ್ ರಝಾಕ್ ಉಳ್ಳಾಲ, ತಾಜುದ್ದೀನ್ ಸುಳ್ಯ, ಜಬ್ಬಾರ್ ಉಪ್ಪಿನಂಗಡಿ, ಹುಸೈನಾರ್ ಮಾಪಲ್ ಹಾಗೂ ಫೈಝಲ್ ಸಂತೋಷ್ ನಗರ ಅವರ ತಂಡದ ಮೂಲಕ ಅಂತ್ಯಕ್ರಿಯೆಗೆ ಬೇಕಾಗಿರುವ ದಾಖಲೆಗಳನ್ನು ಸಂಗ್ರಹಿಸಿ, ಮದೀನಾದಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.