ಮೃತ ಎಎಸ್ಸೈ ಕುಟುಂಬಕ್ಕೆ ವಿಮಾ ಚೆಕ್ ಹಸ್ತಾಂತರ

Update: 2022-06-07 14:38 GMT

ಉಡುಪಿ : ಮೂರು ತಿಂಗಳ ಹಿಂದೆ ಸಂತೆಕಟ್ಟೆ ಬಳಿ ನಡೆದ ಅಪಘಾತ ದಲ್ಲಿ ಮೃತಪಟ್ಟ ಕರಾವಳಿ ಕಾವಲು ಪೊಲೀಸ್ ಘಟಕದ ಎಎಸ್ಸೈ ಗಣೇಶ್ ಪೈ ಕುಟುಂಬಕ್ಕೆ ಎಸ್‌ಬಿಐ ಬ್ಯಾಂಕ್ ವತಿಯಿಂದ 30 ಲಕ್ಷ ರೂ.ಗಳ ವಿಮಾ ಚೆಕ್ ಹಸ್ತಾಂತರಿಸಲಾಗಿದೆ.

ಮೃತರು ಎಸ್‌ಬಿಐ ಪೊಲೀಸ್ ಸ್ಯಾಲರಿ ಪ್ಯಾಕೇಜ್ ಹೊಂದಿದ್ದರಿಂದ, ಅವರ ಪತ್ನಿಗೆ ಎಸ್‌ಬಿಐ ಬ್ಯಾಂಕ್ ವತಿಯಿಂದ 30 ಲಕ್ಷ ರೂ.ಗಳ ವಿಮಾ ಚೆಕ್‌ನ್ನು ಮಲ್ಪೆ ಕರಾವಳಿ ಕಾವಲು ಪಡೆಯ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಕರಾವಳಿ ಕಾವಲು ಪಡೆಯ ಎಸ್ಪಿಅಂಶುಕುಮಾರ್ ಸಮ್ಮುಖದಲ್ಲಿ  ಎಸ್‌ಬಿಐ ಅಧಿಕಾರಿ ಗಳು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News