ಪ್ರವಾದಿ ವಿರುದ್ಧ ನೂಪುರ್ ಶರ್ಮ ಹೇಳಿಕೆ ಖಂಡಿಸಿ ಪ್ರತಿಭಟಿಸಿದ ವಲಸಿಗರನ್ನು ಗಡಿಪಾರು ಮಾಡಲಿರುವ ಕುವೈಟ್; ವರದಿ

Update: 2022-06-13 09:09 GMT
ಸಾಂದರ್ಭಿಕ ಚಿತ್ರ (Photo credit: gulfbusiness.com)

ಕುವೈಟ್: ಉಚ್ಛಾಟಿತ ಬಿಜೆಪಿ ವಕ್ತಾರೆ ನೂಪುರ್ ಶರ್ಮ ಅವರು ಪ್ರವಾದಿ ಕುರಿತು ನೀಡಿದ ಹೇಳಿಕೆಗಳನ್ನು ಖಂಡಿಸಿ ತನ್ನ ದೇಶದಲ್ಲಿ ಪ್ರತಿಭಟಿಸಿದ ವಲಸಿಗರನ್ನು ಗಡೀಪಾರು ಮಾಡುವುದಾಗಿ ಕುವೈಟ್ ಹೇಳಿದೆ ಎಂದು ndtv ವರದಿ ಮಾಡಿದೆ.

ಪ್ರತಿಭಟನಾಕಾರರು ದೇಶದ ಕಾನೂನುಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.

ಕುವೈಟ್ ನಲ್ಲಿ ವಲಸಿಗರಿಂದ ಧರಣಿ ಅಥವಾ ಪ್ರತಿಭಟನೆಗಳಿಗೆ ಅನುಮತಿಯಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಿತರನ್ನು ಬಂಧಿಸಿ ಅವರನ್ನು ಗಡಿಪಾರು ಕೇಂದ್ರಕ್ಕೆ ಸಾಗಿಸಿ ಅಲ್ಲಿಂದ ಅವರ ದೇಶಗಳಿಗೆ ಕಳುಹಿಸಲಾಗುವುದು ಹಾಗೂ ಅವರಿಗೆ ಮತ್ತೆ ಕುವೈಟ್ ಪ್ರವೇಶಕ್ಕೆ ನಿಷೇಧ ಹೇರಲಾಗುವುದು ಎಂದು  ತಿಳಿದು ಬಂದಿದೆ.

ಕುವೈಟ್ ದೇಶದಲ್ಲಿ ವಾಸಿಸುವ ಎಲ್ಲಾ ವಲಸಿಗರು ದೇಶದ ಕಾನೂನನ್ನು ಗೌರವಿಸಬೇಕು ಹಾಗೂ ಯಾವುದೇ ಪ್ರತಿಭಟನೆಗಳಲ್ಲಿ ತೊಡಗಬಾರದು ಎಂದು ಕುವೈಟ್ ಆಡಳಿತ ಹೇಳಿದೆಯೆಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಆದರೆ ಪ್ರತಿಭಟನೆಯಲ್ಲಿ ಭಾಗಿಯಾದವರ ರಾಷ್ಟ್ರೀಯತೆಯ ಬಗ್ಗೆ ತಿಳಿದು ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News