ಉಡುಪಿ ನಾರ್ತ್ ಶಾಲೆಗೆ ಯೂನಿಯನ್ ಬ್ಯಾಂಕಿನಿಂದ ಪೀಠೋಪಕರಣಗಳ ಕೊಡುಗೆ

Update: 2022-06-14 07:03 GMT

ಉಡುಪಿ, ಜೂ.14: ಉಡುಪಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ(ಉಡುಪಿ ನಾರ್ತ್ ಶಾಲೆ)ಗೆ ಯೂನಿಯನ್ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯಿಂದ ಕೊಡುಗೆಯಾಗಿ ನೀಡಲಾದ ಸುಮಾರು ಎರಡು ಲಕ್ಷ ರೂ. ವೌಲ್ಯದ ಪೀಠೋಪಕರಣಗಳ ಹಸ್ತಾಂತರ ಕಾರ್ಯಕ್ರಮ ಮಂಗಳವಾರ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಯೂನಿಯನ್ ಬ್ಯಾಂಕ್ ಮಂಗಳೂರು ವಲಯ ಕಚೇರಿಯ ಮಹಾಪ್ರಬಂಧಕ ಡಾ.ರವೀಂದ್ರ ಬಾಬು ಮಾತನಾಡಿ, ನಮ್ಮ ಬ್ಯಾಂಕ್ ಕೇವಲ ವ್ಯವಹಾರಿಕವಾಗಿ ಕಾರ್ಯನಿರ್ವಹಿಸದೆ ಸಾಮಾಜಿಕ ಜವಾಬ್ದಾರಿಯನ್ನು ಕೂಡ ಪಾಲಿಸುತ್ತಿದೆ. ಶಾಲಾ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಪೀಠೋಪಕರಣಗಳನ್ನು ನೀಡಲಾಗಿದೆ ಎಂದು ಹೇಳಿದರು.

ಬ್ಯಾಂಕಿನ ಉಡುಪಿ ಪ್ರಾದೇಶಿಕ ಕಚೇರಿಯ ಉಪ ಮಹಾಪ್ರಬಂಧಕ ಡಾ.ಎಚ್.ಟಿ.ವಾಸಪ್ಪ, ಸಹಾಯಕ ಮಹಾಪ್ರಬಂಧಕಿ ರೋಶ್ಲಿನ್ ರೊಡ್ರಿಗಸ್, ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ, ಉಪಾಧ್ಯಕ್ಷ ಸೈಯದ್ ಸಿರಾಜ್ ಅಹ್ಮದ್, ಕೋಶಾಧಿಕಾರಿ ಇಕ್ಬಾಲ್ ಮನ್ನಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸುನೀತಾ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ವಸಂತಿ ಬಿ. ಸ್ವಾಗತಿಸಿದರು. ಶಿಕ್ಷಕಿಯರಾದ ಶೋಭಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ ಆಚಾರ್ಯ ವಂದಿಸಿದರು. ಬ್ಯಾಂಕಿನಿಂದ ಡೆಸ್ಕ್, ಬೆಂಚ್, ಬಟ್ಟಲು ಸ್ಟಾಂಡ್, ಬಟ್ಟಲು, ಲೋಟೆಗಳನ್ನು ಶಾಲೆಗೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News