ಭಾರತಕ್ಕೆ ತೆರಳುವ ಪ್ರಜೆಗಳಿಗೆ ವಿಧಿಸಿದ್ದ ಕೋವಿಡ್ ನಿರ್ಬಂಧ ತೆರವು: ಸೌದಿ ಅರೆಬಿಯಾ

Update: 2022-06-20 18:54 GMT

ರಿಯಾದ್, ಜೂ.20: ಟರ್ಕಿ, ಭಾರತ, ಇಥಿಯೋಪಿಯಾ ಮತ್ತು ವಿಯೆಟ್ನಾಮ್ಗೆ ತೆರಳುವ ನಾಗರಿಕೆಗೆ ವಿಧಿಸಿದ್ದ ಕೋವಿಡ್ ಪ್ರಯಾಣ ನಿಬರ್ಂಧವನ್ನು ಸೌದಿ ಅರೆಬಿಯಾ ಸೋಮವಾರ ತೆರವುಗೊಳಿಸಿದೆ ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಎಸ್ಪಿಎ ವರದಿ ಮಾಡಿದೆ.

ಮಾಸ್ಕ್ ಧಾರಣೆ ಸೇರಿದಂತೆ ಕೊರೋನ ಸಾಂಕ್ರಾಮಿಕ ಹರಡದಂತೆ ಕೈಗೊಂಡಿದ್ದ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಈ ತಿಂಗಳ ಆರಂಭದಲ್ಲಿ ಸೌದಿ ಅರೆಬಿಯಾ ತೆರವುಗೊಳಿಸಿತ್ತು. ಈ ಮಧ್ಯೆ ಭಾರತದಲ್ಲಿ ಕೊರೋನ ಸೋಂಕಿನ ಪ್ರಕರಣ ಮತ್ತೆ ಏರುಗತಿಯಲ್ಲಿ ಸಾಗಿದ್ದು ಸೋಮವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಯ ಅವಧಿಯಲ್ಲಿ 12,781 ಹೊಸ ಸೋಂಕು ಪ್ರಕರಣ ದಾಖಲಾಗಿದ್ದು ಸೋಂಕಿತರ ಒಟ್ಟು ಸಂಖ್ಯೆ 4,33,09,473ಕ್ಕೇರಿದೆ. 130 ದಿನಗಳ ಬಳಿಕ ದೈನಂದಿನ ಪಾಸಿಟಿವಿಟಿ ದರ 4%ವನ್ನು ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕಳೆದ 24 ಗಂಟೆಯಲ್ಲಿ 18 ಮಂದಿ ಮೃತಪಟ್ಟಿದ್ದು ಸೋಂಕಿನಿಂದ ಮೃತರ ಸಂಖ್ಯೆ 5,24,873ಕ್ಕೇರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 76,700ಕ್ಕೇರಿದೆ ಎಂದು ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News