ಮಿಸೆಸ್‌ ಫಿಟ್ನೆಸ್‌ ಕ್ವೀನ್‌, ಯುಎಇ ಪ್ರಶಸ್ತಿ ಗೆದ್ದ ಕರ್ನಾಟಕದ ದೇಚಮ್ಮ ಪೂಣಚ್ಚ

Update: 2022-07-01 12:18 GMT

ದುಬೈ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ನಲ್ಲಿ ನಡೆದ ಮಿಸೆಸ್‌ ಫಿಟ್ನೆಸ್‌ ಕ್ವೀನ್‌ ಸ್ಫರ್ಧೆಯಲ್ಲಿ ದೇಚಮ್ಮ ಪೂಣಚ್ಚರವರು ಜಯಶಾಲಿಯಾಗಿದ್ದಾರೆ. ಮೀನಾ ಅಸ್ರಾನಿ ಮಾಲಕತ್ವದ ಮಹಿಳಾ ಸಬಲೀಕರಣದ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವ ಯುಎಇ ಮೂಲದ ಬ್ರ್ಯಾಂಡ್‌ ಬೀಂಗ್‌ ಮುಸ್ಕಾನ್‌ ಈ ಸ್ಫರ್ಧೆಯನ್ನು ಆಯೋಜಿಸಿತ್ತು.

ಜೂನ್ 26 ರಂದು ದುಬೈ ಸಿಲಿಕಾನ್ ಓಯಸಿಸ್‌ನ ರಾಡಿಸನ್ ರೆಡ್‌ನಲ್ಲಿ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯು ಯುಎಇಯಲ್ಲಿ ವಾಸಿಸುವ ಎಲ್ಲಾ ರಾಷ್ಟ್ರೀಯರಿಗೂ ಭಾಗವಹಿಸಲು ಮುಕ್ತವಾಗಿತ್ತು. 

ದೇಚಮ್ಮರವರು ಪ್ರಸ್ತುತ ಗೃಹಿಣಿಯಾಗಿದ್ದಾರೆ. ಇವರು ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಹಳೆಯ ವಿದ್ಯಾರ್ಥಿನಿ ಹಾಗೂ ಮೊದಲ ಬ್ಯಾಚ್‌ನ ವಿದ್ಯಾರ್ಥಿನಿಯೂ ಆಗಿದ್ದರು. ತಮ್ಮ ಪ್ರೌಢಶಾಲೆ, ಪಿಯು ಶಿಕ್ಷಣವನ್ನು ಜೈನ್ ಹೈಸ್ಕೂಲ್ ಹಾಗೂ ಪಿಯು ಕಾಲೇಜು ಮೂಡುಬಿದಿರೆಯಲ್ಲಿ ಮುಂದುವರೆಸಿದರು. ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದರು.

1997ರಲ್ಲಿ ಅವರು ಮಿಸ್‌ ಭುವನೇಂದ್ರ ಪ್ರಶಸ್ತಿ, 1998ರಲ್ಲಿ ಜೇಸಿ ಕುಲ್ಯಾಡಿ ಕ್ವೀನ್‌ ಪ್ರಶಸ್ತಿಯನ್ನು ಗೆದ್ದಿದ್ದರು. ಮೂಲತಃ ಕೊಡಗಿನವರಾದ ದೇಚಮ್ಮರವರು ಮೂಡುಬಿದಿರಿಯಲ್ಲಿ ತಮ್ಮ ಶಿಕ್ಷಣ ಪೂರೈಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News