ಉಡುಪಿ: ಪ್ರಗತಿಪರ ರೈತ ಬಿ.ವಿ.ಪೂಜಾರಿ ಪೆರ್ಡೂರು ನಿಧನ

Update: 2022-07-01 16:51 GMT

ಉಡುಪಿ: ಜಿಲ್ಲೆಯ ಪ್ರಗತಿಪರ ರೈತ, ರೈತರ ಪರವಾಗಿ ಹಲವು ಹೋರಾಟಗಳನ್ನು ನಡೆಸಿದ್ದ, ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷರಾಗಿದ್ದ ಬಿ.ವಿ.ಪೂಜಾರಿ ಪೆರ್ಡೂರು (78) ಅವರು ಇಂದು ಸಂಜೆ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘದಲ್ಲಿ ಮೂರು ಅವಧಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಬಿ.ವಿ.ಪೂಜಾರಿ, ಜಿಲ್ಲೆಯಲ್ಲಿ ರೈತರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದರೊಂದಿಗೆ ಜಿಲ್ಲೆಯ ರೈತರ ಪ್ರಮುಖ ಸಮಸ್ಯೆಗಳಾದ ಕಾಡುಪ್ರಾಣಿಗಳ ಹಾವಳಿ, ವಿದ್ಯುತ್ ಸಮಸ್ಯೆ, ಹಣ್ಣು ಬಿಡುವ ಮರಬೆಳೆಸುವಂತೆ ರೈತರನ್ನು ಪ್ರೇರೇಪಿಸುವುದು, ಜಿಲ್ಲೆಯಲ್ಲಿನ ನೀರಿನ ಸಮಸ್ಯೆ  ಮೊದಲಾದವುಗಳ ಬಗ್ಗೆ ಅತೀವ ಕಾಳಜಿಯನ್ನು ಹೊಂದಿ ನಿರಂತರ ಹೋರಾಟಗಳನ್ನು ನಡೆಸಿದ್ದರು.

ಸ್ವತಹ ಪ್ರಗತಿಪರ ರೈತರಾಗಿದ್ದ ಇವರು ಕೃಷಿಯಲ್ಲಿ ತಾವು ನಡೆಸಿದ ಪ್ರಯೋಗ ಗಳನ್ನು ಉಳಿದವರಿಗೂ ನಡೆಸಲು ಪ್ರೇರೇಪಿಸುತಿದ್ದರು. ಜಿಲ್ಲೆಯ ರೈತರು ಎದುರಿಸುವ ಪ್ರಮುಖ ಸಮಸ್ಯೆಯಾದ ಕಾಡುಪ್ರಾಣಿಗಳ ಹಾವಳಿ ಬಗ್ಗೆ ಜೋರಾದ ಧ್ವನಿ ಎತ್ತುತಿದ್ದ ಇವರು ಇವುಗಳ ಪರಿಹಾರಕ್ಕಾಗಿ ನಿರಂತರವಾಗಿ  ಪ್ರಯತ್ನ ನಡೆಸುತ್ತಲೇ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News