ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಕಳವು

Update: 2022-07-02 15:57 GMT

ಮಲ್ಪೆ, ಜು.೨: ಮಲ್ಪೆ ಕೊಳದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಜೂ.೩೦ರ ಸಂಜೆಯಿಂದ ಜು.೨ರ ಬೆಳಗಿನ ಮಧ್ಯಾವಧಿಯಲ್ಲಿ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿ ಯಾಗಿದೆ.

ಅಂಗನವಾಡಿಯ ಎದುರಿನ ಮುಖ್ಯ ಕಬ್ಬಿಣದ ಬಾಗಿಲಿನ ಡ್ರಿಲ್ ಚಿಲಕ ಮುರಿದು ಒಳನುಗ್ಗಿದ ಕಳ್ಳರು, ೩೦೦೦ರೂ. ಮೌಲ್ಯದ ಮೊಬೈಲ್, ಸ್ತ್ರೀಶಕ್ತಿ ಸಂಘದ ಡಬ್ಬದಲ್ಲಿದ್ದ  ೧೦,೯೦೦ ರೂ. ನಗದು ಹಣ ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News