ಕೇರಳ: ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಶಾಸಕ ಪಿ.ಸಿ. ಜಾರ್ಜ್ ಬಂಧನ
Update: 2022-07-02 16:37 GMT
ತಿರುವನಂತಪುರ, ಜು. 2: ಸೌರ ಫಲಕ (ಸೋಲಾರ್ ಪ್ಯಾನೆಲ್) ಪ್ರಕರಣದ ಆರೋಪಿ ಲೈಂಗಿಕ ಕಿರುಕುಳ ಆರೋಪಿಸಿ ಸಲ್ಲಿಸಿದ ದೂರಿನ ಆಧಾರದಲ್ಲಿ ಕೇರಳದ ಹಿರಿಯ ರಾಜಕಾರಣಿ ಹಾಗೂ ಮಾಜಿ ಶಾಸಕ ಪಿ.ಸಿ. ಜಾರ್ಜ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನಲ್ಲಿ ಯುವತಿ, ಪಿ.ಸಿ. ಜಾರ್ಜ್ ತನ್ನನ್ನು ತೈಕಾಡ್‌ನಲ್ಲಿರುವ ಅತಿಥಿ ಗೃಹಕ್ಕೆ ಫೆಬ್ರವರಿ 10ರಂದು ಆಹ್ವಾನಿಸಿದ್ದರು. ಅಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದರು. ಅನಂತರ ತಾನು ಅವರಿಂದ ನಿರಂತರ ಅನುಚಿತ ಸಂದೇಶಗಳನ್ನು ಸ್ವೀಕರಿಸಿದೆ ಎಂದು ಆರೋಪಿಸಿದ್ದಾರೆ.
ಚಿನ್ನ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಆರೋಪಕ್ಕೆ ಸಂಬಂಧಿಸಿ ಕ್ರೈಮ್ ಬ್ರಾಂಚ್‌ನಿಂದ ಇಲ್ಲಿನ ಅತಿಥಿ ಗೃಹದಲ್ಲಿ ವಿಚಾರಣೆಗೆ ಒಳಗಾಗುತ್ತಿರುವ ಸಂದರ್ಭ ಕಂಟೋನ್ಮೆಂಟ್ ಪೊಲೀಸರು ಪಿ.ಸಿ. ಜಾರ್ಜ್ ಅವರನ್ನು ಕಸ್ಟಡಿಗೆ ತೆಗೆದುಕೊಂಡರು.