ಡಯಾಲಿಸೀಸ್ ರೋಗಿಗಳ ಸಹಾಯಾರ್ಥವಾಗಿ ʼಟೀಂ ಬಿ ಹ್ಯೂಮನ್ʼ ವತಿಯಿಂದ ಕ್ರಿಕೆಟ್ ಪಂದ್ಯಾಟ; ಟ್ರೋಫಿ ಗೆದ್ದ ಫಾಸ್ಟೆಕ್ ತಂಡ

Update: 2022-07-08 09:06 GMT

ಜುಬೈಲ್: ಮಂಗಳೂರಿನ ಟೀಂ ಬಿ ಹ್ಯೂಮನ್ ಸಮಾಜ ಸೇವಾ ಸಂಸ್ಥೆಯು ನಗರದಲ್ಲಿ ಡಯಾಲಿಸೀಸ್ ರೋಗಿಗಳ ಸಹಾಯಾರ್ಥವಾಗಿ ಸೌದಿ ಅರೇಬಿಯಾದ ಜುಬೈಲ್‌ನ ಅಲ್ ಫಲಾಹ್ ಮೈದಾನ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಚಾಂಪಿಯನ್ ಟ್ರೋಫಿ- 2022 ಸೀಸನ್ 1ನ್ನು ಫಾಸ್ಟೆಕ್ ತಂಡ ಪ್ರಥಮ ಮತ್ತು ಅಲ್ ಫಲಾಹ್ ದ್ವಿತೀಯ ಬಹುಮಾನ ಗೆದ್ದಿದೆ.

ಹೊನಲು ಬೆಳಕಿನ ಈ ಕ್ರಿಕೆಟ್ ಪಂದ್ಯಾಟದಲ್ಲಿ 12ತಂಡವು ಭಾಗವಹಿಸಿತ್ತು. ಸಮಾರೋಪ ಸಮಾರಂಭದಲ್ಲಿ ಅಲ್ ಮುಝೈನ್‌ನ ಮಾಲಕ ಝಕರಿಯಾ ಜೋಕಟ್ಟೆ, ಎಕ್ಸ್‌ಪರ್ಟೈಸ್‌ನ ಮಾಲಕ ಶೇಖ್ ಕರ್ನಿರೆ, ವೈಟ್‌ಸ್ಟೋನ್‌ನ ಮಾಲಕ, ಟೀಂ ಬಿ ಹ್ಯೂಮನ್‌ನ ಟ್ರಸ್ಟಿ ಶರೀಫ್ ಜೋಕಟ್ಟೆ, ಸ್ಯಾಂಡ್ ಟೆಕ್‌ನ ಮಾಲಕ, ಟೀಂ ಬಿ ಹ್ಯೂಮನ್‌ನ ಟ್ರಸ್ಟಿ ಯೂನುಸ್ ಮಣಿಪಾಲ ಅವರನ್ನು ಸನ್ಮಾನಿಸಲಾಯಿತು.

ಕೊರೋನ ಕಾಲದಲ್ಲಿ ಸೌದಿಯಲ್ಲಿ ಸಂಕಷ್ಟಕ್ಕೀಡಾಗಿದ್ದ ಪ್ರವಾಸಿಗರು ಊರಿಗೆ ಹಿಂದಿರುಗಳು ನೆರವಾದ  ಫಯಾಝ್ ಕುಪ್ಪೆಪದವು ಅವರನ್ನೂ ಗೌರವಿಸಲಾಯಿತು.

ಅತಿಥಿಗಳಾಗಿ ಪ್ರಮುಖರಾದ ಮುಹಮ್ಮದ್ ಅಲ್ಬುನೈನ್, ಅಶ್ಫಾಕ್ ಹಮೀದ್, ರಝಾಕ್, ನವಾಝ್ ಅಹ್ಮದ್, ಅಬ್ದುಲ್ ಕರೀಂ, ಅನ್ಸಾಫ್, ನ್ಯಾಯವಾದಿ ಅಬ್ದುಲ್ ಅಝೀಝ್ ಮತ್ತಿತರರು ಭಾಗವಹಿಸಿದ್ದರು.

ಟೀಂ ಬಿ ಹ್ಯೂಮನ್‌ನ ಸ್ಥಾಪಕ ಆಸಿಫ್ ಡೀಲ್ಸ್, ಟೀಂ ಬಿ ಹ್ಯೂಮನ್‌ನ ಜುಬೈಲ್ ಘಟಕದ ಅಧ್ಯಕ್ಷ, ಅಲ್ ಫಲಕ್‌ನ ಮಾಲಕ ಅಬ್ದುಲ್ ಬಶೀರ್ ಮತ್ತಿತರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News