ರೋಹಿತ್‌ ಶರ್ಮಾ ಕೈಯಲ್ಲಿ ಎಡಿಟೆಡ್‌ ತಿರಂಗ: ನೆಟ್ಟಿಗರಿಂದ ತರಾಟೆ

Update: 2022-08-18 02:21 GMT

 ಹೊಸದಿಲ್ಲಿ: ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ತಿಳಿಸಲು ಕ್ರಿಕೆಟಿಗ ರೋಹಿತ್‌ ಶರ್ಮ ಹಾಕಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಕಾರಣವಾಗಿದೆ.

75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂಬ ಬರೆಹದೊಂದಿಗೆ ರೋಹಿತ್‌ ಶರ್ಮ ಹಾಕಿರುವ ಚಿತ್ರದಲ್ಲಿ ಇರುವ ಬಾವುಟವು ನೈಜವಾದದ್ದಲ್ಲ, ನಕಲಿ ಎಂದು ಹಲವರು ಟೀಕಿಸಿದ್ದಾರೆ.

ನಿಜವಾದ ಧ್ವಜವನ್ನು ಕೈಯಲ್ಲಿ ಹಿಡಿಯಲು ಕೂಡಾ ರೋಹಿತ್‌ ಶರ್ಮರಿಗೆ ಆಗುವುದಿಲ್ಲವೇ ಎಂದು ಹಲವು ನೆಟ್ಟಿಗರು ಪ್ರಶ್ನಿಸಿದ್ದಾರೆ. ಮತ್ತೊಬ್ಬ ನೆಟ್ಟಿಗರು ಶರ್ಮರನ್ನು ತರಾಟೆಗೆ ತೆಗೆದಿದ್ದು, ನಿಮ್ಮ ಅಕೌಂಟ್‌ ನಂಬರನ್ನು ಕೊಡಿ ಸಹೋದರ, ನಿಮಗೆ ಧ್ವಜಕ್ಕೆ ಬೇಕಾದ ದುಡ್ಡನ್ನು ನಾವೇ ಕೊಡುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ.

ಎಡಿಟ್‌ ಮಾಡಲು ವಿನಿಯೋಗಿಸಬೇಕಾದಷ್ಟು ಸಮಯವೂ ಬೇಡ ನಿಜವಾದ ಬಾವುಟದೊಂದಿಗೆ ಫೋಟೋ ತೆಗೆಯಲು ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

ಸೆಲೆಬ್ರಿಟಿಗಳಿಗೆ ನಿಜವಾದ  ಬಾವುಟವನ್ನು ಹಿಡಿದು ಫೋಟೋ ತೆಗೆಯಲು ಏನು ಕಷ್ಟ? ಯಾಕಾಗಿ ಧ್ವಜ ಹಿಡಿದಂತೆ ಫೋಟೋಶಾಪ್‌ ಮಾಡಿದ ಚಿತ್ರಗಳನ್ನು ಮಾಡುತ್ತಾರೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News