ಕೆಸಿಎಫ್ ದುಬೈ ನಾರ್ತ್ ಝೋನ್ ವತಿಯಿಂದ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ

Update: 2022-08-20 10:05 GMT

ದುಬೈ: ಕೆಸಿಎಫ್ ದುಬೈ ನಾರ್ತ್ ಝೋನ್ ವತಿಯಿಂದ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ದುಬೈಯಲ್ಲಿ ನಡೆಯಿತು. ಝೋನ್ ಅಧ್ಯಕ್ಷ ಇಸ್ಮಾಯೀಲ್ ಮದನಿ ನಗರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೈಫ್ ಸೆಕ್ಟರ್ ಅಧ್ಯಕ್ಷ ಹಂಝ ಸಖಾಫಿ ಕೊಟ್ಟಮುಡಿ ದುಆಗೈದರು.

ಸಂಘಟನಾ ವಿಭಾಗದ ಕಾರ್ಯದರ್ಶಿ ಮುಸ್ತಫ ಮಾಸ್ಟರ್ ಸಂದೇಶ ಭಾಷಣ ಮಾಡಿದರು.

ರಾಷ್ಟ್ರೀಯ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಜಲೀಲ್ ನಿಝಾಮಿ ಎಮ್ಮೆಮಾಡು ಮಾತನಾಡಿ ಶುಭಹಾರೈಸಿದರು.

ಝೋನ್ ಕ್ಯಾಬಿನೆಟ್ ಮುಖಂಡರಾದ ಇಬ್ರಾಹೀಂ ಮದನಿ, ನಿಯಾಝ್ ಬಸರ, ರಫೀಕ್ ಚಾಮಿಯಾಲ್, ಲತೀಫ್ ಪಾತೂರ್,  ಶುಕೂರ್ ಮಣಿಲ, ಬಶೀರ್ ಪಡುಬಿದ್ರೆ, ಅಲಿ ಅಬ್ಬೆಟ್ಟು ಸೆಕ್ಟರ್ ನಾಯಕರಾದ ಅಬ್ದುಲ್ಲಾ ಸಖಾಫಿ, ಮಜೀದ್ ಮರಿಕಳ, ಶಹದ್ ಕೊಳಿಯೂರ್, ಸಿದ್ದೀಕ್ ಮುಡಿಪು, ಆಶ್ರಫ್ ಕೊಲಂಬೆ, ಹಮೀದ್ ಬಸರ, ಮುಹಮ್ಮದ್ ತಕ್ಕಿಯ್ಯ್ ಮತ್ತಿತರರು ಉಪಸ್ಥಿತರಿದ್ದರು.

ಆಡಳಿತ ವಿಭಾಗದ ಕಾರ್ಯದರ್ಶಿ ಹಬೀಬ್ ಸಜಿಪ ಸ್ವಾಗತಿಸಿದರು. ಅಧ್ಯಕ್ಷ ರಿಯಾಝ್ ಕೊಂಡಂಗೇರಿ ವಂದಿಸಿದರು.  ವಿದ್ಯಾರ್ಥಿಗಳಾದ ಮುಆದ್ ರಫೀಕ್,  ಮುಅವ್ವಿದ್, ಮುಆದ್ ಸಲೀಂ, ಯಾಸೀನ್ ನೇತೃತ್ವದಲ್ಲಿ ಭಾರತದ ರಾಷ್ಟ್ರಗೀತೆ ಹಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News