ಮನಾಮ: ಐಎಸ್ಎಫ್ ನಿಂದ 'ಆಝಾದಿ ಕ ಅಮೃತ್ ಮಹೋತ್ಸವ' ಕಾರ್ಯಕ್ರಮ
ಮನಾಮ, ಆ.30: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಇಂಡಿಯನ್ ಸೋಶಿಯಲ್ ಫೋರಂ(ಐಎಸ್ಎಫ್) ಬಹರೈನ್ ಕರ್ನಾಟಕ ಘಟಕದ ವತಿಯಿಂದ 'ಫ್ರೀಡಂ ಫೆಸ್ಟ್' ಕುಟುಂಬ ಸಮ್ಮಿಲನ ಕಾರ್ಯಕ್ರಮವು ಸಲ್ಮಾಬಾದ್ ಅಲ್ ಹಿಲಾಲ್ ಆಸ್ಪತ್ರೆ ಸಭಾಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳ ಛದ್ಮವೇಷ, ಹಾಡು, ದಂಪತಿಗಳಿಗೆ ರಸಪ್ರಶ್ನೆ, ಬಲೂನ್ ಗೇಮ್ ಮತ್ತು ಇನ್ನಿತರ ಹಲವು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಯಿತು.
ಇದೇವೇಳೆ ಐಎಸ್ಎಫ್ ಕಳೆದೆರಡು ವರ್ಷಗಳಲ್ಲಿ ಮತ್ತು ಅದರಲ್ಲೂ ಕೋವಿಡ್ -19ರ ಸಂದರ್ಭದಲ್ಲಿ ನಡೆಸಿದ ಕಾರ್ಯಚಟುವಟಿಕೆಗಳನ್ನು ಕಿರು ದೃಶ್ಯಾವಳಿ ಮೂಲಕ ಐಎಸ್ಎಫ್ ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ವಿವರಿಸಿದರು.
ಸಭಾ ಕಾರ್ಯಕ್ರಮವನ್ನು ಐಎಸ್ಎಫ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಫೀಕ್ ಅಬ್ಬಾಸ್ ಉದ್ಘಾಟಿಸಿ ಮಾತನಾಡಿದರು.
ಐಎಸ್ಎಫ್ ಕರ್ನಾಟಕ ರಾಜ್ಯಾಧ್ಯಕ್ಷ ಇರ್ಫಾನ್ ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕನ್ನಡ ಸಂಘ ಬಹರೈನ್ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಐಎಸ್ಎಫ್ ಕಾರ್ಯಚಟುವಟಿಕೆಯನ್ನು ಶ್ಲಾಘಿಸಿದರು. ಸಾಮಾಜಿಕ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳಲ್ಲಿ ಕನ್ನಡ ಸಂಘದ ಬೆಂಬಲ ಸೂಚಿಸಿದರು.
ಸಾಮಾಜಿಕ ಕಾರ್ಯಕರ್ತ ಅಮರನಾಥ ರೈ, ಮುಹಮ್ಮದ್ ಹಫೀಝ್ ಉಳ್ಳಾಲ್ ಮಾತನಾಡಿದರು.
ಐಎಸ್ಎಫ್ ಕರ್ನಾಟಕ ಘಟಕ ಕಾರ್ಯದರ್ಶಿ ಮುಹಮ್ಮದ್ ನಝೀಮ್ ಸ್ವಾಗತಿಸಿದರು. ಸಮಿತಿಯ ಸದಸ್ಯ ಮುಹಮ್ಮದ್ ಸಿರಾಜ್ ಕನ್ನಂಗಾರ್ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಆಸಿಫ್ ವಂದಿಸಿದರು.