ದುಬೈ: 'ಸೌಹಾರ್ದ ಲಹರಿ' ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

Update: 2022-08-31 03:49 GMT

ದುಬೈ: ಸೌಹಾರ್ದ ಲಹರಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇತ್ತೀಚೆಗೆ ದುಬೈನ ಮಾರ್ಕೊ ಪೋಲೊ ಹೋಟೆಲ್ ನಲ್ಲಿ ನಡೆಯಿತು.

ಸಂಘದ ಗೌರವಾಧ್ಯಕ್ಷರುದಿನೇಶ್ ಸಿ ದೇವಾಡಿಗ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಸಂಘದ ಗೌರವ ಸಲಹೆಗಾರ ದಯಾ ಕಿರೋಡಿಯನ್ ಅವರು ಸಂಘದ ಸ್ಥಾಪನೆ ಹಾಗೂ ಸ್ಥಾಪಕರಾದ ಸದಾಶಿವ ದಾಸ್ ಅವರ ಬಗ್ಗೆ ಮಾತನಾಡಿ ಸಂಘದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಸೂಚಿಸಿದರು.

ಸಂಘದ ನಿಕಟ ಪೂರ್ವ ಅಧ್ಯಕ್ಷ ಅಶೋಕ್ ಅಂಚನ್, ರಿಚರ್ಡ್, ಹನೀಫ್ ಪೆರ್ಲಿಯ ಕಾರ್ಯಕ್ರಮಕ್ಕೆ ಶುಭಾಶಯಗಳನ್ನು ತಿಳಿಸಿದರು.

ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಅಶೋಕ್ ಬೈಲೂರ್, ಉಪಾಧ್ಯಕ್ಷ ಕರುಣಾಕರ ಆಡ್ಯಾರು, ಕಾರ್ಯದರ್ಶಿ ಯುವರಾಜ್ ಕೆ ದೇವಾಡಿಗ, ಖಜಾಂಚಿ  ಸುರೇಶ ಎನ್. ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಯಶವಂತ ಕರ್ಕೆರ ಇವರಿಗೆ ಪುಷ್ಪಗುಚ್ಚ ನೀಡಿ ಗೌರವಿಸಲಾಯಿತು.

ಮನರಂಜನೆ ಕಾರ್ಯಕ್ರಮ ದಲ್ಲಿ ಸಂಘದ ಸದಸ್ಯರಾದ ಸುಕನ್ಯಾ ಶರತ್ ಕರ್ಕೇರ, ಪ್ರಮೋದ್ ದೇವಾಡಿಗ, ರಾಮಚಂದ್ರ ಬೆದ್ರಡ್ಕ, ದಿನೇಶ್ ದೊಡ್ಡಣ್ಣಗುಡ್ಡೆ,  ರಜನೀಶ್ ಅಮೀನ್, ಮಾಸ್ಟರ್ ಮಾಯಾಂಕ್ ಮಹೇಶ್ ಅತ್ತಾವರ, ಮಾಸ್ಟರ್ ಸಮ್ಯಕ್ ಸುರೇಶ ಶೆಟ್ಟಿ, ಮಾಸ್ಟರ್ ಸಮರ್ಥ್ ಸುರೇಶ್ ಶೆಟ್ಟಿ, ಮಾಸ್ಟರ್ ವಿಹಾನ್, ಸುಷ್ಮ ಅಶೋಕ್ ಬೈಲೂರು , ಸುಕೇತ,  ಸಂದೀಪ್ ಪೂಜಾರಿ,  ಸುಂದರ್ ರಾವ್,  ಮಮತಾ,  ಅನನ್ಯ,  ಶರಣ್ಯ ಭಾಗಿಯಾಗಿ ಎಲ್ಲರ ಮನಸೆಳೆದರು.

ದಿನೇಶ್ ದೇವಾಡಿಗ, ಸದಾನ್ ದಾಸ್, ಸುರೇಶ ಚಂದಪ್ಪ ದೇವಾಡಿಗ, ಆನಂದ ವಲಾಲ್, ಸೋಧನ್ ಪ್ರಸಾದ್ ಗಣ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮ ದಲ್ಲಿ ಇ-ಮಣ್ಣು ಚಿತ್ರ ತಂಡದ ಸದಸ್ಯರು ಭಾಗವಹಿಸಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು.

ಸುರೇಶ ಎನ್ ಶೆಟ್ಟಿ ಹಾಗೂ ಮಹೇಶ್ ಅತ್ತಾವರ ಕಾರ್ಯಕ್ರಮದ ನಿರೂಪಣೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News