ಖಾರ್ಕಿವ್ ಬಳಿ 450 ಗೋರಿ ಪತ್ತೆ: ಉಕ್ರೇನ್

Update: 2022-09-16 15:42 GMT
photo : NDTV 

ಕೀವ್, ಸೆ.16: ರಶ್ಯ ಸೇನೆಯ ಹಿಡಿತದಲ್ಲಿದ್ದ ಪೂರ್ವಉಕ್ರೇನ್‍ನ ಇಜಿಯಂ ನಗರವನ್ನು ಇತ್ತೀಚೆಗೆ ಉಕ್ರೇನ್‍ನ ಪಡೆ ಮರುವಶ ಪಡಿಸಿಕೊಂಡಿದ್ದು ನಗರದ ಬಳಿ ಸುಮಾರು 450 ಗೋರಿಗಳು ಪತ್ತೆಯಾಗಿವೆ ಎಂದು ಉಕ್ರೇನ್‍ನ ಹಿರಿಯ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ಆಕ್ರಮಿತ ಪ್ರದೇಶದಲ್ಲಿ  ರಶ್ಯ ಸೇನೆ ನಡೆಸಿದ್ದ ಅತಿರೇಕದ ಭಯೋತ್ಪಾದನೆ, ಹಿಂಸೆ, ಚಿತ್ರಹಿಂಸೆ ಮತ್ತು ಸಾಮೂಹಿಕ ಹತ್ಯೆಗಳಿಗೆ ಈ 450 ಗೋರಿಗಳು ಸಾಕ್ಷಿಯಾಗಿವೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿಯ ಅಧಿಕಾರಿ ಮಿಖಾಯ್ಲೊ ಪೊಡೊಲ್ಯಾಕ್ ಹೇಳಿದ್ದಾರೆ. ಇದೇ ವೇಳೆ, ಪೂರ್ವ ಉಕ್ರೇನ್‍ನ ಖಾರ್ಕಿವ್ ನಗರದಿಂದ ರಶ್ಯದ ಸೇನೆಯನ್ನು ಹಿಮ್ಮೆಟ್ಟಿಸಿದ ಬಳಿಕ ಆ ಪ್ರದೇಶದಲ್ಲಿ ಕನಿಷ್ಟ 10 ಚಿತ್ರಹಿಂಸೆ ಕೊಠಡಿಗಳನ್ನು ಪತ್ತೆಹಚ್ಚಲಾಗಿದೆ. ಬಲಾಕ್ಲಿಯಾ ಪ್ರದೇಶದಲ್ಲಿ 2 ಚಿತ್ರಹಿಂಸೆ ಕೊಠಡಿಗಳು ಪತ್ತೆಯಾಗಿವೆ ಎಂದು ಖಾರ್ಕಿವ್ ಪ್ರದೇಶದ ಪೊಲೀಸ್ ಮುಖ್ಯಸ್ಥ ಇಗೋರ್ ಕ್ಲಿಮೆಂಕೊ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News