ಹೈನುಗಾರರಿಗೆ ಲೀಟರೊಂದಕ್ಕೆ 2.05 ರೂ. ವಿಶೇಷ ಪ್ರೋತ್ಸಾಹ ಧನ: ದ.ಕ.ಹಾಲು ಉತ್ಪಾದಕರ ಸಹಕಾರಿ ಸಂಘ
Update: 2022-10-07 17:31 GMT
ಮಂಗಳೂರು, ಅ.7: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟ ಹಾಲು ಉತ್ಪಾದಕರ ಸಹಕಾರ ಸಂಘದ ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ 5 ಪೈಸೆ ಹೆಚ್ಚಳ ನೀಡಿ ಹಾಲು ಖರೀದಿ ಮಾಡಲು ನಿರ್ಧಾರ ಮಾಡಿದೆ ಎಂದು ದ.ಕ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಇದರಿಂದ ಜಿಲ್ಲಾ ಒಕ್ಕೂಟಕ್ಕೆ ದಿನಕ್ಕೆ 10 ಲಕ್ಷ ರೂ.ಹೆಚ್ಚಿನ ಹೊರೆ ಬೀಳಲಿದೆ. ಹೈನು ಗಾರರಿಗೆ ಈ ವಿಶೇಷ ಪ್ರೋತ್ಸಾಹ ಧನ ಮೂರು ತಿಂಗಳ ವರೆಗೆ ನೀಡಲಾಗುತ್ತದೆ. ಈಗಾಗಲೇ ಹೈನುಗಾರರಿಗೆ ನೀಡಲಾಗುವ ರೂ 5 (ಲೀಟರ್ ಒಂದಕ್ಕೆ ) ಹೊರತಾಗಿ ಹೆಚ್ಚುವರಿಯಾಗಿ ಈ ಪ್ರೋತ್ಸಾಹ ಧನ ನೀಡಲಾಗು ವುದು. ಆದರೆ ಗ್ರಾಹಕರು ನೀಡುವ ಹಾಲಿನ ದರದಲ್ಲಿ ಹೆಚ್ಚಳ ಮಾಡಲಾಗುವುದಿಲ್ಲ ಎಂದು ಸುಚರಿತ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್ ಉಪಸ್ಥಿತರಿದ್ದರು.