ಬಿಸಿಎಫ್ ನಿಂದ ಬಿಸಿಸಿಐ ಮುಖಂಡರಿಗೆ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಪದಾಧಿಕಾರಿಗಳಿಗೆ ಸನ್ಮಾನ
ದುಬೈ, ಅ.8: ಇತ್ತೀಚೆಗೆ ದುಬೈಗೆ ಭೇಟಿ ನೀಡಿದ್ದ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ(BBCI) ನಾಯಕರನ್ನು ಮತ್ತು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಪ್ರತಿನಿಧಿಗಳನ್ನು ದುಬೈಯ ಬ್ಯಾರೀಸ್ ಕಲ್ಚರಲ್ ಫೋರಂ(BCF) ವತಿಯಿಂದ ಸನ್ಮಾನಿಸಲಾಯಿತು.
ದುಬೈಯ ಇಬ್ರಾಹಿಮಿ ಪ್ಯಾಲೇಸ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ವಹಿಸಿದ್ದರು.
ಬಿಸಿಸಿಐ ಕೇಂದ್ರ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಬಿ.ಎಂ.ಮುಮ್ತಾಝ್ ಅಲಿ, ಯು.ಟಿ.ಇಫ್ತಿಕಾರ್, ಆಸಿಫ್, ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಬಿಡಬ್ಲ್ಯುಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಹಿದಾಯತ್ ಅಡ್ಡೂರು, ಹಂಝ ಕನ್ನಂಗಾರ್, ಬಿಸಿಎಫ್ ನಾಯಕರಾದ ಅಬೂ ಸ್ವಾಲಿಹ್, ಇಬ್ರಾಹೀಂ ಗಡಿಯಾರ್, ಸಫ್ವಾನ್, ಅಶ್ಫಾಕ್ ಸಾದಾ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮುಹಮ್ಮದ್ ಬಿಸಿಎಫ್ ಬಗ್ಗೆ ಪ್ರಾಥಮಿಕ ಪರಿಚಯ ನೀಡಿ, ಸರ್ವರನ್ನು ಸ್ವಾಗತಿಸಿದರು. ಬಿಸಿಎಫ್ ಉಪಾಧ್ಯಕ್ಷ ಎಂ.ಇ.ಮೂಳೂರು ಬಿಸಿಎಫ್ ಸಾಧನೆಗಳನ್ನು ವಿವರಿಸಿದರು. ಇನ್ನೋರ್ವ ಉಪಾಧ್ಯಕ್ಷ ಅಬ್ದುಲ್ಲತೀಫ್ ಮುಲ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಿಸಿಸಿಐ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಮಾತನಾಡಿ ಬಿಸಿಸಿಐ ಕಾರ್ಯಚಟುವಟಿಕೆ, ಸಾಧನೆಗಳನ್ನು ವಿವರಿಸಿದರು.
ಈ ಸಂಧರ್ಭದಲ್ಲಿ ಬಿಸಿಸಿಐ ಅಧ್ಯಕ್ಷರು ಮತ್ತು ಇತರ ನಾಯಕರನ್ನು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಪದಾಧಿಕಾರಿಗಳನ್ನು ಹಾಗೂ ಅಬು ಸ್ವಾಲಿಹ್ ಅವರನ್ನು ಬಿಸಿಎಫ್ ಪರವಾಗಿ ಸನ್ಮಾನಿಸಲಾಯಿತು.
ಬಿಸಿಎಫ್ ಸದಸ್ಯರು ಮತ್ತು ಬಿಸಿಎಫ್ ಮಹಿಳಾ ವಿಭಾಗದ ಸದಸ್ಯರು ಉಪಸ್ಥಿತರಿದ್ದರು.
ಬಿಸಿಎಫ್ ಉಪಾಧ್ಯಕ್ಷ ಅಫೀಕ್ ಹುಸೈನ್ ವಂದಿಸಿದರು.
ಡಾ.ಬಿ.ಕೆ.ಯೂಸುಫ್ ಪ್ರಾಯೋಜಕತ್ವದಲ್ಲಿ ಈ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.
ಬಿಸಿಸಿಐ ಮತ್ತು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರು ಬಿಸಿಸಿಐ ದುಬೈ ಘಟಕದ ಅಧ್ಯಕ್ಷ ಎಸ್.ಎಂ.ಬಶೀರ್ ಅವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ದುಬೈಗೆ ಆಗಮಿಸಿದ್ದರು.