ಮುಸ್ಲಿಮರ ಮೀಸಲಾತಿ ಶೇ.8ಕ್ಕೇರಿಸಲು ಲೀಗ್ ಮನವಿ
Update: 2022-10-08 12:06 GMT
ಮಂಗಳೂರು, ಅ.8: ರಾಜ್ಯ ಸರಕಾರವು ಎಸ್‌ಸಿ/ಎಸ್‌ಟಿ ಜನಾಂಗದವರ ಮೀಸಲಾತಿಯನ್ನು ಹೆಚ್ಚಿಸಲು ಮುಂದಾಗಿರುವುದನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಎಸ್. ಸುಲೈಮಾನ್ ಸ್ವಾಗತಿಸಿದ್ದಾರೆ.
ರಾಜ್ಯದ ಜನಸಂಖ್ಯೆಯ ಶೇ.15ರಷ್ಟಿರುವ ಮತ್ತು ಅತ್ಯಂತ ಹಿಂದುಳಿದವರಾದ ಮುಸ್ಲಿಮರ ಮೀಸಲಾತಿಯನ್ನು ಶೇ.4ರಿಂದ 8ಕ್ಕೆ ಏರಿಸಬೇಕೆಂದು ಒತ್ತಾಯಿಸಿದ್ದಾರೆ.
ಶತಮಾನಗಳಿಂದ ಸಾಮಾಜಿಕ ಕಾರಣದಿಂದ ಹಿಂದುಳಿದಿರುವ ಸಮುದಾಯಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಸಂವಿಧಾನ ಕಲ್ಪಿಸಿಕೊಟ್ಟಿರುವ ಮೀಸಲಾತಿ ಅವಕಾಶವನ್ನು ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಇದುವರೆಗೂ ಬಳಸಿಕೊಂಡಿರುವುದು ನಾಡಿನ ದುರಂತ ಎಂದ ಅವರು ಮುಂದಿನ ಚುನಾವಣೆಯ ದೃಷ್ಟಿಯನ್ನು ಬಿಟ್ಟು ಹಿಂದುಳಿದವರ ನೈಜ ಹಿತಾಸಕ್ತಿಯನ್ನು ಕಾಪಾಡಲು ಮುಂದಾಗ ಬೇಕೆಂದು ಆಗ್ರಹಿಸಿದರು.