'ಸಮಸ್ತ' ಮದ್ರಸ ಮೆನೇಜ್ ಮೆಂಟ್ ಸದಸ್ಯತ್ವ ಅಭಿಯಾನಕ್ಕೆ ಕಲ್ಲಿಕೋಟೆಯಲ್ಲಿ ಚಾಲನೆ

Update: 2022-10-08 14:49 GMT

ಕಲ್ಲಿಕೋಟೆ: 'ಸಮಸ್ತ'ದ ಅಧೀನದ ಮದ್ರಸ ಮೆನೇಜ್ ಮೆಂಟ್ ಅಸೋಸಿಯೇಷನ್ (ಎಸ್ಕೆಎಂಎಂಎ) ಇದರ ಕೇಂದ್ರೀಯ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಇಂದು ಕೇರಳದ ಕಲ್ಲಿಕೋಟೆಯ ಸಂಸ್ಥೆಯ ಕಾರ್ಯಾಲಯದಲ್ಲಿ ಚಾಲನೆ ನೀಡಲಾಯಿತು.

'ಸಮಸ್ತ' ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತು ಕೋಯ ತಂಙಳ್ ಅವರು ಸಮಸ್ತ ಕೇರಳ ಮದ್ರಸ ಮೇನೇಜ್ ಮೆಂಟ್ ಅಸೋಸಿಯೇಷನ್ ಕೇಂದ್ರೀಯ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಕೆ.ಕೆ.ಎಸ್. ತಂಙಳ್ ರವರಿಗೆ ಸದಸ್ಯತ್ವ ನೀಡಿ ಅಭಿಯಾನಕ್ಕೆ ಚಾಲನೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಎಸ್ಕೆಎಂಎಂಎ ಅಧ್ಯಕ್ಷ ಕೆ.ಟಿ.ಹಂಝ ಮುಸ್ಲಿಯಾರ್ ಅವರು ವಹಿಸಿದ್ದರು. 'ಸಮಸ್ತ' ಪ್ರಧಾನ ಕಾರ್ಯದರ್ಶಿ ಶೈಖುನಾ ಆಲಿ ಕುಟ್ಟಿ ಮುಸ್ಲಿಯಾರ್  ಪ್ರಾರ್ಥನೆ ನಡೆಸಿದರು. ಸಮಿತಿಯ ರಾಜ್ಯ ಕಾರ್ಯದರ್ಶಿ ಕೋಟೆಪುರಂ ಅಬ್ದುಲ್ಲಾ ಮಾಸ್ಟರ್ ಸ್ವಾಗತಿಸಿದರು.

ಸಮಾರಂಭದಲ್ಲಿ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಅಧ್ಯಕ್ಷ ಮೌಲನಾ ಮೂಸ ಕುಟ್ಟಿ ಹಝ್ರತ್, ಪ್ರಧಾನ ಕಾರ್ಯದರ್ಶಿ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್, ಡಾ. ಎನ್.ಎ.ಎಂ.ಅಬ್ದುಲ್‌ ಖಾದರ್, ಉಮರ್ ಫೈಝಿ ಮುಕ್ಕಂ, ಅಬ್ದುಲ್ ಹಮೀದ್ ಫೈಝಿ ಅಂಬಲಕಡವು, ಎಸ್ಕೆಎಂಎಂಎ ಉಪಾಧ್ಯಕ್ಷ ಕೆ.ಪಿ.ಪಿ.ತಂಙಳ್ ಪಯ್ಯನ್ನೂರು, ದ.ಕ.ಜಿಲ್ಲಾ ಮದ್ರಸ ಮೆನೇಜ್ ಮೆನೇಜ್ ಮೆಂಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಹಾಜಿ ನೇರಳಕಟ್ಟೆ, ಪುತ್ತನಯಿ ಮೊಯ್ದೀನ್ ಫೈಝಿ, ಪಿಯಞಂ ಸಹೀದ್ ಮುಸ್ಲಿಯಾರ್, ಇಸ್ಮಾಯಿಲ್ ಕುಂಞ ಹಾಜಿ, ಎ.ಪಿ.ಪಿ. ತಂಙಳ್ ಅಲ್ ಬುಖಾರಿ, ಕೆ.ಎಂ.ಕುಟ್ಟಿ, ಮೋಹಿನ್ ಕುಟ್ಟಿ ಮಾಸ್ಟರ್, ಮುಹಮ್ಮದ್ ಬಿನ್ ಆದಂ ಕಣ್ಣೂರು, ಸಿ.ಪಿ.ಇಕ್ಬಾಲ್ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News