ಮುಲ್ಕಿ: ವಾರ್ಷಿಕ ಸ್ವಲಾತ್ ಮಜ್ಲಿಸ್
Update: 2022-10-09 09:53 GMT
ಮುಲ್ಕಿ, ಅ.9: ಇಲ್ಲಿನ ಕೆ.ಎಸ್. ರಾವ್ ನಗರ ಶಾಫಿ ಜುಮಾ ಮಸೀದಿ ವತಿಯಿಂದ ಮಸೀದಿ ವಠಾರದಲ್ಲಿ ವಾರ್ಷಿಕ ಸ್ವಲಾತ್ ಮಜ್ಲಿಸ್ ಸಮಾರೋಪ ಸಮಾರಂಭ ಶನಿವಾರ ರಾತ್ರಿ ನಡೆಯಿತು.
ಶಾಫಿ ಜುಮಾ ಮಸೀದಿ ಖತೀಬರದ ಶರೀಫ್ ದಾರಿಮೀ ಅಲ್ ಹೈತಮಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಶೈಖುನಾ ಬೊಳ್ಳೂರು ಉಸ್ತಾದ್ ಸ್ವಲಾತ್ ಮಜ್ಲಿಸ್‌ಗೆ ನೇತೃತ್ವ ನೀಡಿದರು. ಜಮಾಅತ್ ಕಮಿಟಿ ಅಧ್ಯಕ್ಷ ಎಂ.ಇ.ಹನೀಫ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಂ.ಕೆ. ಮುಸ್ತಫ, ಬಶೀರ್ ಅಹ್ಮದ್, ಅಹ್ಮದ್ ಬಾವ, ರಫೀಕ್ ಎ.ಎಚ್., ಬಶೀರ್ ಕುಲಾಯಿ, ಕೆ.ಎಂ. ಶರೀಫ್, ಬಿ.ಎಂ. ಇದ್ದನಬ್ಬ ಮೊದಲಾದವರು ಉಪಸ್ಥಿತರಿದ್ದರು.
ಜಮಾತ್ ಕಮಿಟಿ ಕಾರ್ಯದರ್ಶಿ ಮುಬಿನ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರಹೀಂ ಧನ್ಯವಾದ ಗೈದರು