ಬೊಳ್ಳೂರು: ಮಿಲಾದುನ್ನಬಿ ಪ್ರಯುಕ್ತ ಪ್ರವಾದಿ ಸಂದೇಶ ಜಾಥಾ

Update: 2022-10-09 09:56 GMT

ಮುಲ್ಕಿ: ಇಲ್ಲಿನ ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸ್ಜಿದ್ ವತಿಯಿಂದ ಲೋಕಾನುಗ್ರಹಿ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ.) ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಮೀಲಾದುನ್ನಬಿ ಜಾಥಾ ರವಿವಾರ ನಡೆಯಿತು.

ಈ ಸಂದರ್ಭ ಜುಮಾ ಮಸೀದಿಯ ಖತೀಬ್ ಶೈಖುನಾ ಬೊಳ್ಳೂರು ಉಸ್ತಾದ್, ಮುದರ್ರಿಸ್ ಆರೀಫ್ ಬಾಖವಿ ಮುದರ್ರಿಸ್, ಆಡಳಿತ ಸಮಿತಿಯ ಉಪಾಧ್ಯಕ್ಷ ಟಿ.ಎಚ್. ಅಬ್ದುಲ್ ರಹಿಮಾನ್, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಎ. ಅಬ್ದುಲ್ ಖಾದರ್, ಅಬ್ದುಲ್ ಅಝೀಝ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News