ತಲಪಾಡಿ; ಮೀಲಾದುನ್ನಬಿ ಜಾಥಾ
Update: 2022-10-09 14:31 GMT
ಮಂಗಳೂರು, ಅ.9: ಸುನ್ನಿ ಕೊ-ಆರ್ಡಿನೇಶನ್ ಕಮಿಟಿ ತಲಪಾಡಿ ರೇಂಜ್ ಇದರ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮ ದಿನಾಚರಣೆ ಪ್ರಯುಕ್ತ ಬೃಹತ್ ಮೀಲಾದ್ ಜಾಥಾವು ರವಿವಾರ ತಲಪಾಡಿ ಬಾಪ ಕುಂಞಿ ಮುಸ್ಲಿಯಾರ್‌ರ ಮಖಾಮ್ ಝಿಯಾರತಿನೊಂದಿಗೆ ಆರಂಭಗೊಂಡು ಉಚ್ಚಿಲ ಅರಬಿ ಶಹೀದ್ ಮಖಾಂ ಝಿಯಾರತಿನೊಂದಿಗೆ ಸಮಾಪ್ತಿಗೊಂಡಿತು.
ಎಸ್‌ವೈಎಸ್ ರಾಜ್ಯಾಧ್ಯಕ್ಷ ಎಮ್ಮೆಸ್ಸೆಮ್ ಅಬ್ದುರ‌್ರಶೀದ್ ಝೈನಿ ಮತ್ತು ಉಚ್ಚಿಲ 407 ಜುಮಾ ಮಸ್ಜಿದ್‌ನ ಮುದರ್ರಿಸ್ ಇಬ್ರಾಹಿಂ ಫೈಝಿ ದುಆಗೈದರು.
ಸುನ್ನಿ ಕೊ-ಆರ್ಡಿನೇಶನ್ ಉಪಾಧ್ಯಕ್ಷ ಮುನೀರ್ ಸಖಾಫಿ ಜಾಥಾಕ್ಕೆ ಚಾಲನೆ ನೀಡಿದರು. ಹುಬ್ಬುರ‌್ರಸೂಲ್ ಸಮಿತಿಯ ಸಂಚಾಲಕ ಅಬ್ದುಲ್ಲಾ ಮದನಿ, ಕೊ-ಆರ್ಡಿನೇಷನ್ ವ್ಯಾಪ್ತಿಯ 16 ಮೊಹಲ್ಲಾದ ವಿದ್ಯಾರ್ಥಿಗಳು, ಮುಅಲ್ಲಿಮರು,ಪೋಷಕರು ಭಾಗವಹಿಸಿದ್ದರು.