ಕಣ್ಣೂರು: ಮಿಲಾದುನ್ನಬಿ ಸೌಹಾರ್ದ ಕೂಟ

Update: 2022-10-09 16:08 GMT

ಮಂಗಳೂರು, ಅ.9: ಕಣ್ಣೂರಿನ ಎ1 ಹೆಲ್ಪಿಂಗ್ ಫೌಂಡೇಶನ್ ಮತ್ತು ಇಂಡಿಯನ್ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಫಾರ್ಮ್‌ಗಳ ಜಂಟಿ ಸಹಯೋಗದಲ್ಲಿ ಪ್ರವಾದಿ ಮುಹಮ್ಮದ್ (ಸ)ರವರ ಜನ್ಮದಿನದ ಪ್ರಯುಕ್ತ ಮಿಲಾದ್ ಸೌಹಾರ್ದ ಕೂಟ ರವಿವಾರ ನಡೆಯಿತು.

ಈ ಸಂದರ್ಭ ಕಣ್ಣೂರು ಜುಮಾ ಮಸೀದಿಯ ಖತೀಬ್ ಅನ್ಸಾರ್ ಫೈಝಿ ಮತ್ತು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅತಿಥಿಯಾಗಿ ಭಾಗವಹಿಸಿದ್ದ ಪ್ರವೀಣ್ ಕೊಂಚಾಡಿ ಮುಖ್ಯ ಭಾಷಣಗೈದರು. ಕಾರ್ಯಕ್ರಮದಲ್ಲಿ ಸುನಿಲ್ ಕೊಡಕ್ಕಲ್, ದಿನೇಶ್ ಕಣ್ಣೂರು, ದಯಾನಂದ, ಪ್ರವೀಣ್, ರವಿರಾಜ್, ನಾಸಿರ್ ಸಾಮಣಿಗೆ, ಮುಹಮ್ಮದ್ ಮೋನು, ಷರೀಫ್ ವಳಾಲ್, ನವೀನ್, ಎಸ್‌ಡಿ ಶಾಕೀರ್ ಕಣ್ಣೂರು,  ನಿಝಾರ್ ಕಣ್ಣೂರು, ಎ೧ ಹೆಲ್ಪಿಂಗ್ ಫೌಂಡೇಶನ್ ರಿಯಾಝ್, ಇಂಡಿಯನ್ ಹ್ಯೂಮನ್ ರೈಟ್ಸ್ ದ.ಕ. ಜಿಲ್ಲಾಧ್ಯಕ್ಷ ಇಕ್ಬಾಲ್ ಪರ್ಲಿಯಾ ಉಪಸ್ಥಿತರಿದ್ದರು. ವಸಂತ್ ಶೆಟ್ಟಿ ಕಾರ್ಯಕ್ರಮ  ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News