ನೇರಳಕಟ್ಟೆ: ʼಹಳ್ಳಿಯತ್ತ ಸಾಹಿತ್ಯದ ಚಿತ್ತ' ಕಾರ್ಯಕ್ರಮ

Update: 2022-10-09 17:53 GMT

ಪುತ್ತೂರು: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ ಮತ್ತು ಚಿಗುರೆಲೆ ಸಾಹಿತ್ಯ ಬಳಗ ವತಿಯಿಂದ ನೆಟ್ಲ ಮುಡ್ನೂರು ಗ್ರಾ.ಪಂ. ಸಹಯೋಗದಲ್ಲಿ `ಹಳ್ಳಿಯತ್ತ ಸಾಹಿತ್ಯದ ಚಿತ್ತ' ಕಾರ್ಯಕ್ರಮ ಪಂಚಾಯತ್‌ನ ನೇರಳಕಟ್ಟೆ ಸಭಾಭವನದಲ್ಲಿ ಅ.8ರಂದು ನಡೆಯಿತು.

ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತುನ ಬಂಟ್ವಾಳ ತಾ. ಘಟಕದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಉದ್ಘಾಟಿಸಿದರು . ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ ರವರು ಮಾತನಾಡಿ ಸಾಹಿತ್ಯ ಕ್ಷೇತ್ರದಲ್ಲಿ ಯುವಜನತೆ ತೊಡಗಿಸಿಕೊಳ್ಳಬೇಕು. ಸಾಹಿತಿಯೊಬ್ಬ ಉತ್ತಮ ಸಮಾಜ ನಿರ್ಮಾಣ ಮಾಡುತ್ತಾನೆ, ಹಾಗಾಗಿ ಚಿಗುರೆಲೆ ಸಾಹಿತ್ಯ ಬಳಗದ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನ ಶ್ಲಾಘನೀಯ ಎಂದರು.

ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಗೌರವ ಕಾರ್ಯದರ್ಶಿ ವಿ. ಸುಬ್ರಹ್ಮಣ್ಯ ಭಟ್ ಮಾತನಾಡಿ ಸಾಹಿತ್ಯದ ಚಿತ್ತ ಹಳ್ಳಿಯತ್ತ ಹೋದರೆ ಹೆಚ್ಚು ಸಾಹಿತ್ಯ ಕೃಷಿ ಬೆಳೆಯುತ್ತವೆ. ಮಕ್ಕಳಲ್ಲಿ ಸಾಹಿತ್ಯದ ಜಾಗೃತಿ ಮೂಡಿಸಲು ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಹೇಳಿದರು.

ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಪಂಚಾಯತ್ ಸ್ವಚ್ಚ ಭಾರತ್ ಮಿಷನ್ ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕ ಡೊಂಬಯ್ಯ ಇಡ್ಕಿದು ಮಾತನಾಡಿ, ಕವಿತೆಗೆ ನಿಖರವಾದ ವಿವರಣೆಯೊಂದು ಇರುವುದಿಲ್ಲ. ಕವನದಲ್ಲಿ ರೂಪಕಗಳ ಮೇಲೆ ರೂಪಕಗಳನ್ನು ತಂದರೆ ಅದೂ ಬಹಳ ಕೃತಕವಾಗಿ ಅನಿಸುತ್ತದೆ ಎಂದು ಅವರು ಹೇಳಿದರು. 

ನೆಟ್ಲಮುಡ್ನೂರು ಗ್ರಾ.ಪಂ ಅಧ್ಯಕ್ಷ ಸಚ್ಚಿದಾನಂದ, ಚಲನಚಿತ್ರ ನಟಿ ವಸಂತಲಕ್ಷ್ಮೀ ಪುತ್ತೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಪೂವಪ್ಪ ನೇರಳಕಟ್ಟೆ, ಕ.ಸಾ.ಪ ಬಂಟ್ವಾಳ ತಾಲೂಕು ಘಟಕದ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ, ವಿಟ್ಲ ಹೋಬಳಿ ಕಸಾಪ ಅಧ್ಯಕ್ಷ, ಪತ್ರಕರ್ತ ಗಣೇಶ ಪ್ರಸಾದ ಪಾಂಡೇಲು ಭಾಗವಹಿಸಿದ್ದರು. 

ಕವಿಗೋಷ್ಠಿಯಲ್ಲಿ ತುಳಸಿ ಕೈರಂಗಳ, ಗ್ರೀಷ್ಮಾ, ಧೃತಿ ಏಮಾಜೆ, ಕೌಶೀಲ, ಫಾತಿಮತ್ ಶಿಫಾನಾ, ಮಾನಸ ವಿಜಯ್ ಕೈತಂಜೆ, ಗೋಪಾಲಕೃಷ್ಣ ನೇರಳಕಟ್ಟೆ, ಅಶೋಕ್ ಎನ್. ಕಡೆಶಿವಾಲಯ, ಆನಂದ ರೈ ಅಡ್ಕಸ್ಥಳ, ಅನ್ನಪೂರ್ಣ ಎನ್.ಕೆ, ಹರೀಶ್ ಮಂಜೊಟ್ಟಿ, ಇಬ್ರಾಹಿಂ ಖಲೀಲ್, ರಾಧಾಕೃಷ್ಣ ಎರುಂಬು , ನಿನಾದ್ ಕೈರಂಗಳ, ರಮ್ಮ ಎಂ. ಶ್ರೀನಿವಾಸ್, ಆತ್ಮಿಕಾ, ಲೇಖನಾ,ಪ್ರಗತಿ, ದೀಪ್ತಿ ಅಡ್ಡಂತ್ತಡ್ಕ, ನವ್ಯಶ್ರೀ ಸ್ವರ್ಗ, ಪ್ರಜ್ಞಾ ಕುಲಾಲ್ ಕಾವು, ಸುಪ್ರೀತಾ ಚರಣ್ ಪಾಲಪ್ಪೆ, ಚಂದ್ರಮೌಳಿ ಕಡಂದೇಲು, ಮಂಜುನಾಥ ಎನ್. ಪುತ್ತೂರು, ನಿಭಾ ಬಟ್ಲಡ್ಕ, ವಿಂಧ್ಯಾ ಎಸ್. ರೈ, ಕಾವ್ಯಶ್ರೀ ಅಳಿಕೆ, ಸಾರ್ಥಕ್. ಟಿ., ಬಮಿತ.ಎಂ. ಹೆಚ್., ರಹಾನ ಎಂ., ಅಪೂರ್ವ ಕಾರಂತ್, ಮುಸ್ತಫಾ ಬೆಳ್ಳಾರೆ, ಹರಿಣಾಕ್ಷಿ ನೇರಳಕಟ್ಟೆ, ಶಶಿಧರ್ ಏಮಾಜೆ, ನಾರಾಯಣ ಕುಂಬ್ರ ಸ್ವರಚಿತ ಕವನ ವಾಚಿಸಿದರು.

ಶಶಿಧರ್ ಏಮಾಜೆ ಪ್ರಸ್ತಾವನೆಗೈದರು. ಸುಪ್ರೀತಾ ಚರಣ್ ಪಾಲಪ್ಪೆ ಪ್ರಾರ್ಥಿಸಿದರು, ಚಿಗುರೆಲೆ ಸಾಹಿತ್ಯ ಬಳಗದ ನಾರಾಯಣ ಕುಂಬ್ರ ಸ್ವಾಗತಿಸಿ, ದೀಪ್ತಿ ಅಡ್ಡಂತ್ತಡ್ಕ ವಂದಿಸಿದರು. ತುಳಸಿ ಕೈರಂಗಳ ಸಭಾ ಕಾರ್ಯಕ್ರಮ ನಿರೂಪಿಸಿದರು. ರಾಧಾಕೃಷ್ಣ ಎರುಂಬು ಹಾಗೂ ಅನ್ನಪೂರ್ಣ ಎನ್.ಕೆ ಕಾರ್ಯಕ್ರಮ ನಿರ್ವಹಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಅದೃಷ್ಟವಂತ ಕವಿ

ಕವಿಗೋಷ್ಠಿಯಲ್ಲಿ 35ಕ್ಕೂ ಮಿಕ್ಕ ಕವಿಗಳು ಭಾಗವಹಿಸಿದ್ದು, ಕಾರ್ಯಕ್ರಮದ ಕೊನೆಯಲ್ಲಿ ಓರ್ವ ಅದೃಷ್ಟವಂತ ಕವಿಯ ಹೆಸರನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಇಬ್ರಾಹಿಂ ಖಲೀಲ್ ಪುತ್ತೂರು `ಅದೃಷ್ಟವಂತ ಕವಿ' ಆಗಿ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News