ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ, ಈದ್ಗಾ ಮಸೀದಿ ವತಿಯಿಂದ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ

Update: 2022-10-09 18:30 GMT

ಮಂಗಳೂರು: ಲೋಕಾನುಗ್ರಹಿ ಹಝ್ರತ್ ಪ್ರವಾದಿ ಮುಹಮ್ಮದ್ ಮುಸ್ತಫಾ ಸ.ಅ ರವರ ಮೀಲಾದುನ್ನಬಿ ಪ್ರಯುಕ್ತ ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ವತಿಯಿಂದ  ರವಿವಾರ ಮಗ್ರಿಬ್ ನಮಾಝಿನ ಬಳಿಕ ಲೈಟ್ ಹೌಸ್ ಹಿಲ್ ಬಾವಟಗುಡ್ಡೆ ಈದ್ಗಾ ಮಸೀದಿಯಲ್ಲಿ  ಧಾರ್ಮಿಕ ಮತ ಪ್ರವಚನ  ನಡೆಯಿತು‌.

ಮಂಗಳೂರು ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿಯ ಅಧ್ಯಕ್ಷರಾದ ಹಾಜಿ ಡಾ. ಯೆನೆಪೋಯ ಅಬ್ದುಲ್ಲ ಕುಂಞಿ ಯವರು ಅಧ್ಯಕ್ಷತೆವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಆಡಳಿತ ಸಮಿತಿ ಸದಸ್ಯರಾದ  ಡಾ| SM ರಶೀದ್ ಹಾಜಿ ಯವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಹಾಗೂ ಅಥಿತಿಗಳನ್ನು ಸ್ವಾಗತಿಸಿದರು, ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬರಾದ ಬಹು ಅಲ್‌ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಮಲಯಾಳದಲ್ಲಿ ಹಾಗೂ ಬೋಳಿಯಾರ್ ಜುಮಾ ಮಸೀದಿ ಖತೀಬರಾದ ಬಹು ರಿಯಾಝ್ ರಹ್ಮಾನಿ ಕಿನ್ಯ ಕನ್ನಡದಲ್ಲಿ ಭಾಷನ ನಡೆಸಿದರು.

ಮಸೀದಿಯ ಉಪಾಧ್ಯಕ್ಷರಾದ ಕೆ.ಅಶ್ರಫ್ ಕಾರ್ಯಕ್ರಮಕ್ಕೆ ಶುಭಾಶಯ ಕೋರಿದರು, ಈದ್ಗಾ ಮಸೀದಿ ಖತೀಬ್ ಬಹು ಮುಸ್ತಫಾ ಅಝ್ಹರಿ, ಆಡಳಿತ ಸಮಿತಿ ಸದಸ್ಯರಾದ ಅಬ್ದುಲ್ ಸಮದ್ ಹಾಜಿ, ಅದ್ದು ಹಾಜಿ ಹಾಗೂ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News