ನಿವೃತ್ತ ಮೇಜರ್ ವಿಜಯಚಂದ್ರಗೆ ಮಾಜಿ ಶಾಸಕ ಜೆ.ಆರ್. ಲೋಬೊ ಸನ್ಮಾನ

Update: 2022-10-11 15:24 GMT

ಮಂಗಳೂರು, ಅ.11: ಭಾರತೀಯ ಸೇನಾ ಪಡೆಯಲ್ಲಿ ಸುಮಾರು 13 ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿರುವ ಮೇಜರ್ ವಿಜಯಚಂದ್ರ ಅವರನ್ನು ಮಾಜಿ ಶಾಸಕ ಜೆ.ಆರ್. ಲೋಬೋ ಸನ್ಮಾನಿಸಿದರು.

ಬಜಾಲ್‌ನ ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು. ನಿವೃತ್ತರಾಗುವ ವೇಳೆಯಲ್ಲಿ ಅವರು ಅಸ್ಸಾಂ ನಲ್ಲಿರುವ ರೆಜಿಮೆಂಟ್ ಒಫ್ ಆರ್ಟಿಲ್ಲರಿಯಲ್ಲಿ ಮೇಜರ್  ಹುದ್ದೆಯಲ್ಲಿದ್ದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜೆ.ಆರ್. ಲೋಬೋ, ಮೇಜರ್ ವಿಜಯಚಂದ್ರರವರು ಸುಮಾರು 13 ವರ್ಷಗಳ ಭಾರತೀಯ ಸೇನಾ ಪಡೆಯಲ್ಲಿ ಅವಿರತವಾಗಿ ಸೇವೆ ಸಲ್ಲಿಸಿದ್ದರು. ಕಠಿಣ ಹಿಮಪ್ರಪಾತ ಪ್ರದೇಶ ಗಳಾದ ಜಮ್ಮು, ಲಡಾಖ್, ಲೇಹ್, ಅಸ್ಸಾಂ ಮುಂತಾದ ಕಡೆಗಳಲ್ಲಿ ತನ್ನ ಅರೋಗ್ಯವನ್ನು ಲೆಕ್ಕಿಸದೇ ದೇಶ ಸೇವೆಗೈದರು. ಸಾಮಾನ್ಯ ಜನರಿಗೆ ಅಲ್ಲಿ ತಮ್ಮ ನಿತ್ಯಜೀವನವನ್ನು ಸಾಗಿಸಲು ಕಷ್ಟಕರವಾದ ಸ್ಥಳಗಳಾಗಿರುವು ದರಿಂದ ವಿಜಯಚಂದ್ರರವರು ಅಲ್ಲಿಗೆ ಹೋಗಿ ಸೇವೆ ಮಾಡಿರುವುದು ನಮಗೆಲ್ಲರಿಗೂ ಬಹಳಷ್ಟು ಹೆಮ್ಮೆ ತಂದಿದೆ ಎಂದರು.

ಈ ಸಂದರ್ಭದಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲೀಮ್, ಕಾರ್ಪೊರೇಟರ್ ಅಶ್ರಫ್ ಬಜಾಲ್, ಭರತೇಶ್ ಅಮೀನ್, ಟಿ. ಕೆ. ಸುಧೀರ್, ಚಂದ್ರಕಲಾ ಜೋಗಿ, ಜ್ಯೋತಿ ಅಶೋಕ್, ಮೇಸಿ ಡಿಸೋಜಾ, ನರೇಶ್ ಕುಮಾರ್, ಹರಿಪ್ರಸಾದ್, ಆಸೀಫ್ ಬಜಾಲ್, ಕೃತಿನ್ ಕುಮಾರ್, ಶಾನ್ ಡಿಸೋಜಾ, ಆಸೀಫ್ ಜೆಪ್ಪು, ಲಕ್ಷ್ಮಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News