ಬಜಾಲ್: ಉಚಿತ ಆರೋಗ್ಯ ತಪಾಸಣಾ ಶಿಬಿರ
ಮಂಗಳೂರು, ಅ.11: ಬಜಾಲ್‌ನ ಸಂತ ವಿನ್ಸೆಂಟ್ ಪಾವ್ಲ್ ಸಂಸ್ಥೆ, ಸಾಮಾನ್ಯ ಸೇವಾ ಆಯೋಗ, ಸಾಮಾಜಿಕ ಅಭಿವೃದ್ಧಿ ಆಯೋಗ ಹಾಗೂ ಲಯನ್ಸ್ ಕ್ಲಬ್ ಬಲ್ಮಠ ಇದರ ಜಂಟಿ ಅಶ್ರಯದಲ್ಲಿ ಕಂಕನಾಡಿಯ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ, ಕನ್ನಡಕ ವಿತರಣೆ ಮತ್ತು ಅರೋಗ್ಯ ತಪಾಸಣಾ ಕಾರ್ಯಕ್ರಮ ಇತ್ತೀಚೆಗೆ ಬಜಾಲ್ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.
ಬಜಾಲ್ ಚರ್ಚಿನ ಧರ್ಮಗುರು ವಂ.ಫಾ.ಆಂಡ್ರ್ಯೂ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ವಲಯ ಅಧ್ಯಕ್ಷ ಲ್ಯಾನ್ಸಿ ಕಾರ್ಲೊ, ಲಯನ್ಸ್ ಕ್ಲಬ್ ಬಲ್ಮಠ ಅಧ್ಯಕ್ಷ ಲ್ಯಾನ್ಸಿ ಮಿನೇಜಸ್, ಚರ್ಚಿನ ಉಪಾಧ್ಯಕ್ಷ ದೀಪಕ್ ಡಿಸೋಜ, ಫಾ. ಮುಲ್ಲರ್ಸ್ ಆಸ್ಪತ್ರೆಯ ವೈದ್ಯ ಡಾ.ಜೆಫ್ರಿ ಲೂವಿಸ್, ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸಂಸ್ಥೆಯ ಅಧ್ಯಕ್ಷ ಹಾಗೂ ಸಾಮಾಜಿಕ ಅಭಿವೃಧ್ಧಿ ಅಯೋಗದ ಸಂಚಾಲಕ ಹೆನ್ರಿ ಡಿಸೋಜ, ಸಾಮಾನ್ಯ ಸೇವಾ ಅಯೋಗದ ಸಂಚಾಲಕ ಸ್ಟೇನಿ ಲಸ್ರಾದೊ ಉಪಸ್ಥಿತರಿದ್ದರು.
ಡೊಲ್ಫಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.