ದುಬೈ: ಪ್ರಪ್ರಥಮ DSBK ಸೂಪರ್ ಬೈಕ್ ರೇಸಿಂಗ್ 'ದಿ ಅಡ್ರೆನಲಿನ್ ಕಪ್' ಯಶಸ್ವಿ ಸಮಾರೋಪ

Update: 2022-10-12 17:37 GMT

ದುಬೈ, ಅ.12: ಡಿ ಎಸ್ ಬಿ ಕೆ (DSBK) ಆಯೋಜಿಸಿದ್ದ ಬಹುನಿರೀಕ್ಷಿತ ಪ್ರಥಮ ವರ್ಷದ ಅಂತರ್ ರಾಷ್ಟ್ರೀಯ ಸೂಪರ್  ಬೈಕ್ ರೇಸಿಂಗ್ ( Superbike racing) ಸ್ಪರ್ಧಾಕೂಟ ' ದಿ ಅಡ್ರೆನಲಿನ್ ಕಪ್ ' (‘The Adrenaline Cup’) ಇಲ್ಲಿನ ದುಬೈ ಆಟೋಡ್ರೋಮ್ ಸರ್ಕ್ಯೂಟ್ ನಲ್ಲಿ  ಯಶಸ್ವಿಯಾಗಿ ರವಿವಾರ  ಮುಕ್ತಾಯವಾಯಿತು. ವಿಶ್ವದ ವಿವಿಧ ದೇಶಗಳಿಂದ ಬಂದಿದ್ದ ರೈಡರ್ ಗಳು ಸ್ಪರ್ಧಿಸಿದ್ದ ಈ ರೋಮಾಂಚನಕಾರಿ ಸ್ಪರ್ಧೆಯನ್ನು ಸಾವಿರಾರು ರೇಸಿಂಗ್ ಪ್ರಿಯರು ನೋಡಿ ಆನಂದಿಸಿದರು.  

ದುಬೈ ಬಿಸಿಲ ಬೇಗೆಯನ್ನು ಲೆಕ್ಕಿಸದ ರೇಸಿಂಗ್ ಅಭಿಮಾನಿಗಳು ರೈಡರ್ ಗಳು ಹುರಿದುಂಬಿಸುತ್ತಾ ತಾವು ರೇಸಿಂಗ್ ನ ಖುಷಿ ಅನುಭವಿಸಿದರು. ಅಂತಿಮವಾಗಿ  ಮೂವರು ವಿಜೇತರಾದರು. 

ಖತರ್ ನ ಸಈದ್ ಅಲ್ ಸುಲೈತಿ (Saeed Al Sulaiti) ಪ್ರಥಮ ಸ್ಥಾನ ಪಡೆದರೆ, ಇಟಲಿಯ ಸಾಸ್ಕ ಟೋಟರೋ (Saska Totaro) ಹಾಗು ಯುಎಇ ಪ್ರಜೆ  ಆರಿಫ್ ಅಲ್ ಮರ್ಝೂಕಿ (Aref Al Marzooqi)  ಕ್ರಮವಾಗಿ ಎರಡನೇ ಹಾಗು ಮೂರನೇ ಸ್ಥಾನ ಗೆದ್ದರು.  

"ದುಬೈ ಬಿಸಿಲಿಗೆ ರೇಸ್ ಇನ್ನಷ್ಟು ಸವಾಲಿನದಾಗಿತ್ತು. ಆದರೆ ಡಿ ಎಸ್ ಬಿ ಕೆ ಅತ್ಯುತ್ತಮವಾಗಿ ಆಯೋಜಿಸಿದ್ದ ಈ ರೇಸ್ ನಲ್ಲಿ ಅತ್ಯುತ್ತಮ ರೈಡರ್ ಗಳ ಜೊತೆ ಸ್ಪರ್ಧಿಸಿದ್ದು ಬಹಳ ಖುಷಿ ನೀಡಿದೆ. ಡಿ ಎಸ್ ಬಿ ಕೆ ಆಯೋಜಿಸುವ ಪ್ರತಿ ರೇಸ್ ಅನ್ನು ಕಾತರದಿಂದ ಕಾಯುತ್ತೇನೆ  " ಎಂದು ಚಾಂಪಿಯನ್ ಸಈದ್ ಅಲ್ ಸುಲೈತಿ ಪ್ರತಿಕ್ರಿಯಿಸಿದರು. 

ರೇಸ್ ವೀಕ್ಷಿಸಲು ಬಂದಿದ್ದವರಿಗೆ ಸಂಗೀತ, ಅಕ್ರೋಬ್ಯಾಟಿಕ್ ಪ್ರದರ್ಶನ, ಫುಡ್ ಟ್ರಕ್ ಗಳು ಸಹಿತ ಹಲವು ಮನರಂಜನೆ ಇತ್ತು. ಜೊತೆಗೆ ಅಂತರ್ ರಾಷ್ಟ್ರೀಯ ರೇಸರ್ ಗಳನ್ನು ಭೇಟಿ ಮಾಡುವ ವಿಶೇಷ ಅವಕಾಶವೂ ಇತ್ತು.   

" ನಮ್ಮ ಕನಸು ನನಸಾಗಿ ಮೊದಲ ವರ್ಷದ ಸ್ಪರ್ಧೆ ಯಶಸ್ವಿಯಾಗಿ ನಡೆದಿರುವುದು ಅತ್ಯಂತ ಸಂತಸದ ಅನುಭವವಾಗಿದೆ. ನಮಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಇಡೀ ಯು ಎ ಇ ಯಲ್ಲಿ ಸೂಪರ್ ಬೈಕ್ ರೇಸಿಂಗ್ ಕ್ಷೇತ್ರದಲ್ಲಿ ಇದು ಬಹಳ ದೊಡ್ಡ ಹೆಜ್ಜೆಯಾಗಲಿದೆ ಎಂಬ ಭರವಸೆ ನಮಗಿದೆ. ಮುಂದಿನ ವರ್ಷದಿಂದ ಇಡೀ ವಿಶ್ವದ ಗಮನ ಸೆಳೆಯುವ ರೋಮಾಂಚಕಾರಿ ರೇಸಿಂಗ್ ಸ್ಪರ್ಧೆಯಾಗಿ ಇದು ಮೂಡಿ ಬರಲಿದೆ. ಜೊತೆಗೆ ಪ್ರತಿಷ್ಠಿತ ಬ್ರ್ಯಾಂಡ್ ಗಳಿಗೂ ಇದೊಂದು ದೊಡ್ಡ ವೇದಿಕೆಯಾಗಲಿದೆ  " ಎಂದು ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಸ್ವತಃ ಖ್ಯಾತ ಅಂತರ್ ರಾಷ್ಟ್ರೀಯ ಬೈಕ್ ರೇಸರ್ ಕೂಡ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯ  ಮೂಡಬಿದ್ರೆಯವರಾದ    ಡಿ ಎಸ್ ಬಿ ಕೆ   ಸಹ ಸ್ಥಾಪಕ ನಾಸಿರ್ ಸಯ್ಯದ್ (Nasir Syed) ಹೇಳಿದ್ದಾರೆ.   

" ಈ ಬಾರಿ ಸಿಕ್ಕಿರುವ ಪ್ರತಿಕ್ರಿಯೆ ನಮಗೆ ಬಹಳ ಖುಷಿ ನೀಡಿದೆ. ಇದು ಕ್ರೀಡೆಯ ಶಕ್ತಿ. ಮುಂದಿನ ವರ್ಷ ಪೂರ್ಣ ಪ್ರಮಾಣದಲ್ಲಿ ಇದನ್ನು ನಡೆಸಲು ನಮಗೆ ಇದರಿಂದ ವಿಶ್ವಾಸ ಬಂದಿದೆ " ಎಂದು  ಡಿ ಎಸ್ ಬಿ ಕೆ   ಸಹ ಸ್ಥಾಪಕ ಸಲ್ಮಾನ್ ಯೂಸುಫ್ ಖಾನ್ (Salman Yusuff Khan) ಹೇಳಿದ್ದಾರೆ.  

ಮುಂದಿನ ವರ್ಷ ಬಹಳ ದೊಡ್ಡ ಪ್ರಮಾಣದಲ್ಲಿ ಡಿ ಎಸ್ ಬಿ ಕೆ (DSBK) ರೇಸಿಂಗ್ ಆಯೋಜಿಸಲಿದ್ದು ಮೋಟರ್ ಬೈಕ್ ರೇಸಿಂಗ್ ನಲ್ಲಿ  ಯು ಎ ಇ ಭಾಗದ ಮುಂಚೂಣಿ ಸಂಸ್ಥೆಯಾಗುವ ಗುರಿ ಹಾಕಿಕೊಂಡಿದೆ.

(ಮಿ. ಹಫ್ಸಾ ಶಾಹಿದ್, ಇವೆಂಟ್ಸ್ ಕೋಆರ್ಡಿನೇಟರ್ ARP ಮೀಡಿಯಾ, ಡಾ. S.M. ತಾಹಿರ್, ಅಧ್ಯಕ್ಷರು ಇಕ್ರಾ ಗ್ರೂಪ್, ಮಜೀದ್ ಖಾನ್ CEO- NkN ಮೀಡಿಯಾ, ರಾಜೇಶ್ ಲೋದಾ MD- NkN ಮೀಡಿಯಾ ಮತ್ತು Ms. ಖುಷ್ಬೂ ಗುಪ್ತಾ- DSBK ಮಾಧ್ಯಮ ಮತ್ತು ಮಾರುಕಟ್ಟೆ ಸಲಹೆಗಾರರು )

ಅದ್ನಾನ್ ಶೇಖ್, ಡಾ. ಎಸ್.ಎಂ. ತಾಹಿರ್, ಮತ್ತು ಮುಹಮ್ಮದ್ ಮೊಯಿಝ್ ಖಾನ್‌

ಡಿಎಸ್‌ಬಿಕೆ ಕಾರ್ಯಕ್ರಮದ ಪ್ರಮೋಟರ್ ನಾಸಿರ್, ಇಕ್ರಾ ಗ್ರೂಪ್ ಅಧ್ಯಕ್ಷ ಡಾ. ಎಸ್.ಎಂ. ತಾಹಿರ್‌, ನಯೀಮ್‌, DSBK.

ಹಾಝಿಕ್ ಚೌಧರಿ, ಸಾಬಿಕ್ ಬಶೀರ್, ಡಾ. ಎಸ್.ಎಂ. ತಾಹಿರ್, ಮತ್ತು ಹಫ್ಸಾ ಶಾಹಿದ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News