ಮಂಗಳೂರಿನಿಂದ ತಿರುವನಂತಪುರಕ್ಕೆ‌ ಪ್ರತಿ ದಿನ ಪಾರ್ಸೆಲ್ ರವಾನೆಗೆ ವಿಶೇಷ ಅಂಚೆ ವಾಹನ ಕಾರ್ಯಾರಂಭ

Update: 2022-10-14 11:40 GMT

ಮಂಗಳೂರು, ಅ.14: ಭಾರತೀಯ ಅಂಚೆ ಇಲಾಖೆಯು‌ ಭಾರತದಾದ್ಯಂತ ತನ್ನದೇ ಆದ‌ ಅಖಿಲ‌ ಭಾರತ ರೋಡ್‌ ಟ್ರಾನ್ಸ್ ಪೋರ್ಟ್ ನೆಟ್ ವರ್ಕ್ ಹೊಂದುವತ್ತ ಹೆಜ್ಜೆ ಹಾಕುತ್ತಿದೆ. ಈ ನಿಟ್ಟಿನಲ್ಲಿ ಪ್ರತಿದಿನ ಮಂಗಳೂರಿನಿಂದ ತಿರುವನಂತಪುರಂಗೆ ಪಾರ್ಸೆಲ್ ರವಾನಿಸಲು ತನ್ನದೇ ಆದ ಪಾರ್ಸೆಲ್ ವಾಹನದ ಸೌಲಭ್ಯಕ್ಕೆ ಬುಧವಾರ ರಾತ್ರಿ ಚಾಲನೆ ನೀಡಲಾಗಿದೆ.

ಮಂಗಳೂರು ಅಂಚೆ ಕೇಂದ್ರದಿಂದ ಕಣ್ಣೂರು, ಕ್ಯಾಲಿಕಟ್, ತ್ರಿಶೂರು,ಕೊಚ್ಚಿ ಮಾರ್ಗವಾಗಿ ತಿರುವನಂತಪುರಂಗೆ ಈ ವಾಹನ ತಲುಪಲಿದೆ.

 ಇದೇ ಸಮಯದಲ್ಲಿ ತಿರುವನಂತಪುರದಲ್ಲೂ ಮಂಗಳೂರು ಕಡೆಗೆ ಹೊರಡುವ ವಾಹನಕ್ಕೆ ಚಾಲನೆ ನೀಡಲಾಗಿದೆ.

ಈ ವಾಹನದ ಮೂಲಕ ಕೇರಳದ ವಿವಿಧ ಭಾಗಗಳಿಗೆ ಮಂಗಳೂರು,‌ ಪುತ್ತೂರು, ಉಡುಪಿಯಿಂದ ಕಳುಹಿಸಲ್ಪಡುವ ಪಾರ್ಸೆಲ್ ಗಳ ತ್ವರಿತ ಸಾಗಾಟ ಮತ್ತು ಡೆಲಿವರಿ ಸಾಧ್ಯವಾಗಲಿದೆ. ಅಲ್ಲದೆ, ಕೇರಳದ ಯಾವುದೇ ಊರಿನಿಂದ ಮಂಗಳೂರಿಗೆ ಕಳುಹಿಸಲ್ಪಡುವ ಪಾರ್ಸೆಲ್ ಗಳೂ ಕ್ಲಪ್ತ ಸಮಯದಲ್ಲಿ ತಲುಪಲಿವೆ ಎಂದು ಅಂಚೆ ಇಲಾಖೆಯ ಪ್ರಕಟನೆ ತಿಳಿಸಿದೆ.

ಅಂಚೆ ಮೂಲಕ ಕೇರಳ ಕಡೆಗೆ ಪಾರ್ಸೆಲ್ ಕಳುಹಿಸಲಿಚ್ಛಿಸುವ ಉದ್ದಿಮೆದಾರರು, ಇ-ಕಾಮರ್ಸ್ ಕಂಪೆನಿಗಳು,‌ ಸಣ್ಣ ಕೈಗಾರಿಕೆ ದಾರರು ಮಂಗಳೂರು ಅಂಚೆ ವಿಭಾಗದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಗಳಾದ ಶಂಕರ್ ( ಮೊ. +91 94488 69772) ಅಥವಾ ಸುಭಾಷ್ (+91 80736 78509)   ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಪ್ರಕರಣ: ‘ಶಿವಲಿಂಗ'ದ ವೈಜ್ಞಾನಿಕ ತನಿಖೆ ನಡೆಸದಂತೆ ನ್ಯಾಯಾಲಯ ಆದೇಶ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News