ಉಳ್ಳಾಲ ತಾಲೂಕು ಎರಡನೇ ಬ್ಯಾರಿ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

Update: 2022-10-15 11:58 GMT

ಮಂಗಳೂರು: ಬ್ಯಾರಿ ಲೇಖಕರು ಮತ್ತು ಕಲಾವಿದರ ಕೂಟ ‘ಮೇಲ್ತೆನೆ’ಯ ವತಿಯಿಂದ ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್ ಕ್ಯಾಂಪಸ್‌ನಲ್ಲಿ ನಡೆಯುವ ಉಳ್ಳಾಲ ತಾಲೂಕು ಎರಡನೆ ಬ್ಯಾರಿ ಸಾಹಿತ್ಯ ಸಮ್ಮೇಳನಕ್ಕೆ ಇಂದು ಬೆಳಗ್ಗೆ ಚಾಲನೆ ನೀಡಲಾಯಿತು.

ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ನಝೀರ್ ಉಳ್ಳಾಲ್ ನೇತೃತ್ವದಲ್ಲಿ ಸಮ್ಮೇಳನಾಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಅವರನ್ನು ಕಣಚೂರು ಕ್ಯಾಂಪಸ್‌ನ ‘ಸಾಹಿತಿ ಮರ್ಹೂಂ ಯು.ಎ. ಖಾಸಿಂ ಉಳ್ಳಾಲ’ ದ್ವಾರದಿಂದ ಮರ್ಹೂಂ ಕುರಿಯ ಶೇಖ್ ಹಾಜಿ ವೇದಿಕೆಯವರೆಗೆ ದಫ್ ಮೆರವಣಿಗೆಯೊಂದಿಗೆ ಕರೆದುಕೊಂಡು ಹೋಗಲಾಯಿತು.

ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸಸ್‌ನ ಅಧ್ಯಕ್ಷ ಹಾಜಿ ಯು.ಕೆ. ಕಣಚೂರು ಮೋನು ಸಮ್ಮೇಳನವನ್ನು ಉದ್ಘಾಟಿಸಿದರು.

ಮೇಲ್ತೆನೆಯ ಬುಲೆಟಿನ್‌ನ್ನು ಸ್ವಾಗತ ಸಮಿತಿಯ ಉಪಾಧ್ಯಕ್ಷ ಅಬ್ಬಾಸ್ ಉಚ್ಚಿಲ್ ಬಿಡುಗಡೆಗೊಳಿಸಿದರು. ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯೆ ಆಯಿಶಾ ಡಿ. ಅಬ್ಬಾಸ್, ದೇರಳಕಟ್ಟೆಯ ಬದ್ರಿಯಾ ಜುಮಾ ಮಸ್ಜಿದ್‌ನ ಅಧ್ಯಕ್ಷ ಅಬೂಬಕರ್ ಹಾಜಿ ನಾಟೆಕಲ್, ಜೆಡಿಎಸ್ ಮುಖಂಡ ನಾಟೆಕಲ್ ಅಬೂಬಕರ್ ಹಾಜಿ, ಜಿಪಂ ಮಾಜಿ ಸದಸ್ಯ ಅಬ್ದುಲ್ ಅಝೀಝ್ ಮಲಾರ್, ಕೆಪಿಸಿಸಿ ಕೋ- ಆರ್ಡಿನೇಟರ್ ಫಾರೂಕ್ ಉಳ್ಳಾಲ್, ಉದ್ಯಮಿ ಡಾ. ಕೆ.ಎಂ. ಮುನೀರ್ ಬಾವಾ, ಬೆಲ್ಮ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಯೂಸುಫ್ ಬಾವ ಬೆಲ್ಮ,ಅಬೂಸಾಲಿ ಹಾಜಿ ಕುರಿಯಕ್ಕಾರ್ , ಕಣಚೂರು ಪಿಯು ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಶಾಹಿದಾ ಬಿ.ಎಂ., ಕುನಿಲ್ ಪಬ್ಲಿಕ್ ಸ್ಕೂಲ್‌ನ ಉಪಾಧ್ಯಕ್ಷ ಪಿ.ಎಸ್. ಮೊಯ್ದಿನ್ ಕುಂಞಿ, ಪಾವೂರು ಗ್ರಾಪಂ ಉಪಾಧ್ಯಕ್ಷ ಮುಹಮ್ಮದ್ ಅನ್ಸಾರ್ ಇನೋಳಿ, ಹಿರಿಯ ಪತ್ರಕರ್ತರಾದ ಡಿ.ಐ. ಅಬೂಬಕ್ಕರ್ ಕೈರಂಗಳ, ಸುನ್ನಿ ಸಂದೇಶದ ಪ್ರಕಾಶಕ ಮುಸ್ತಫಾ ಫೈಝಿ ಕಿನ್ಯ, ಸಿಪಿಎಂ ಮುಖಂಡ ರಫೀಕ್ ಹರೇಕಳ ಭಾಗವಹಿಸಿದ್ದರು.

ಮೇಲ್ತೆನೆಯ ಪದಾಧಿಕಾರಿಗಳಾದ ಆಲಿಕುಂಞಿ ಪಾರೆ, ಇಸ್ಮಾಯೀಲ್ ಟಿ., ಬಶೀರ್ ಕಲ್ಕಟ್ಟ, ಹಂಝ ಮಲಾರ್, ಮನ್ಸೂರ್ ಅಹ್ಮದ್ ಸಾಮಣಿಗೆ, ಬಶೀರ್ ಅಹ್ಮದ್ ಕಿನ್ಯ, ಅಶೀರುದ್ದೀನ್ ಮಂಜನಾಡಿ, ಬಿ.ಯಂ ಕಿನ್ಯ, ಪ್ರಚಾರ ಸಮಿತಿಯ ಸಂಚಾಲಕರಾದ ಮಂಗಳೂರ ರಿಯಾಝ್, ಸೋಶಿಯಲ್ ಫಾರೂಕ್, ಅರ್ಥಿಕ ಸಮಿತಿಯ ಸಂಚಾಲಕ ಯು.ಕೆ. ಖಾಲಿದ್ ಉಳ್ಳಾಲ, ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ನಝರ್ ಷಾ ಪಟ್ಟೋರಿ, ನಾಸಿರ್ ಸಾಮಣಿಗೆ, ಅಬ್ದುಲ್ ರಝಾಕ್ ಶಾಲಿಮಾರ್, ನಾಸಿರ್ ಸಾಮಣಿಗೆ, ಇಬ್ರಾಹಿಂ ನಡುಪದವು, ಮುಸ್ತಪಫಾ ರೆಹಮಾನ್, ಇಬ್ರಾಹಿಂ ಕುಂಞಿ ಪಾರೆ, ಸಿದ್ದೀಕ್ ಎಸ್.ರಾಝ್, ಆಸೀಫ್ ಬಬ್ಬುಕಟ್ಟೆ, ಅಶ್ರಫ್ ದೇರಳಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ಸಮ್ಮೇಳನದಲ್ಲಿ ಕವಿಗಳು ಮತ್ತು ಕವಯತ್ರಿಯರ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಕವನ ಹಾಗೂ ಮೆಹಂದಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News