ಪೊಲೀಸ್ ದಬ್ಬಾಳಿಕೆ ಆರೋಪ: ಮುಸ್ಲಿಂ ಒಕ್ಕೂಟ ಖಂಡನೆ
Update: 2022-10-16 12:06 GMT
ಮಂಗಳೂರು, ಅ.16: ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ಅ.18ರಂದು ಸುರತ್ಕಲ್ ಟೋಲ್ ಮುತ್ತಿಗೆ ಕಾರ್ಯಕ್ರಮವನ್ನು ಹತ್ತಿಕ್ಕಲು ಹೋರಾಟಗಾರರ ವಿರುದ್ಧ ಪೊಲೀಸರು ನಡೆಸುವ ದಬ್ಬಾಳಿಕೆಯನ್ನು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ.ಅಶ್ರಫ್ ಖಂಡಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರಕಾರವು ಜನರ ಪ್ರಜಾಸತ್ತಾತ್ಮಕ ಹೋರಾಟವನ್ನು ಹತ್ತಿಕ್ಕಲು ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿವೆ. ಹೋರಾಟಗಾರರ ಮನೆಗಳಿಗೆ ಪೊಲೀಸರು ತಡರಾತ್ರಿ ನುಗ್ಗಿ ನೊಟೀಸ್ ನೀಡುತ್ತಿರುವುದು ಅಕ್ಷಮ್ಯ. ಅನ್ಯಾಯದ ವಿರುದ್ಧ ದ್ವನಿ ಎತ್ತುವ ಜನ ಸಮೂಹವನ್ನು ಪೊಲೀಸರು ಸದೆಬಡಿಯಲು ಮುಂದಾಗಿರುವ ಕ್ರಮದ ವಿರುದ್ಧ ಜನರು ಸಿಡಿದೇಳಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.