ಹಿರಾ ಕಾಲೇಜು: ವಿದ್ಯಾರ್ಥಿನಿಯರಿಗಾಗಿ ಫ್ರೆಶರ್ಸ್ ಡೇ, ಪ್ರಮಾಣವಚನ ಕಾರ್ಯಕ್ರಮ
Update: 2022-10-17 05:06 GMT
ಮಂಗಳೂರು, ಅ. 17: ಹಿರಾ ಮಹಿಳಾ ಕಾಲೇಜು,, ಬಬ್ಬುಕಟ್ಟೆ ಇಲ್ಲಿನ ಹಿರಿಯ ವಿದ್ಯಾರ್ಥಿನಿಯರಿಂದ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗಾಗಿ ಫ್ರೆಶರ್ಸ್ ಡೇ -2022 ಮತ್ತು ವಿದ್ಯಾರ್ಥಿ ಸಚಿವ ಸಂಪುಟದ ಪ್ರಮಾಣವಚನ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಸೂಕ್ತ ವೇದಿಕೆಯನ್ನು ಒದಗಿಸುವ ಮೂಲಕ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡಲಾಯಿತು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಹರ್ಷ ಕೆ.ಪಿ. ಮತ್ತು ಉಪನ್ಯಾಸಕಿಯರು ಉಪಸ್ಥಿತರಿದ್ದರು. ಹಲೀಮಾ ಝಿಕ್ರ ಕಿರಾಅತ್ ಪಠಿಸಿದರು. ವಿದ್ಯಾರ್ಥಿ ನಾಯಕಿ ಫಾಹಿಮಾ ಮುಸ್ತಾಕ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.