‘ಸ್ಫೂರ್ತಿಯ ಚಿಲುಮೆಗಳು’ ಲೇಖನಗಳ ಸಂಕಲನ ಬಿಡುಗಡೆ
ಮಂಗಳೂರು, ಅ.17: ಅಮೃತ ಪ್ರಕಾಶ ಪತ್ರಿಕೆಯ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ 36ನೇ ಕೃತಿಯಾಗಿ ಶಿವಮೊಗ್ಗದ ಪಿಇಎಸ್‌ಐಎಎಂ ಕಾಲೇಜಿನ ಕನ್ನಡ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಪ್ರವೀಣ್ ಚಂದ್ರ ಅವರ ‘ಸ್ಫೂರ್ತಿಯ ಚಿಲುಮೆಗಳು’ ಲೇಖನಗಳ ಸಂಕಲನ ಸೋಮವಾರ ಬಿಡುಗಡೆಗೊಂಡಿತು.
ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಂಜುನಾಥ್ ಎಸ್.ರೇವಣ್ಕರ್ ಕೃತಿ ಬಿಡುಗಡೆಗೊಳಿಸಿ, ಸಮಾಜದಲ್ಲಿ ಶೂನ್ಯದಿಂದ ಸಾಧಕರಾದವರ ಕುರಿತು ಪುಸ್ತಕದಲ್ಲಿ ವಿವರಿಸಲಾಗಿದ್ದು, ವಿದ್ಯಾರ್ಥಿಗಳು ಓದುವುದರಿಂದ ಜೀವನದಲ್ಲಿ ಸಾಧನೆ ಮಾಡಲು ಹುರುಪು ಬರುತ್ತದೆ ಎಂದರು.
ಕೃತಿ ಪರಿಚಯ ಮಾಡಿದ ಆಳ್ವಾಸ್ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಯೋಗೀಶ್ ಕೈರೋಡಿ, ಕೃತಿಯಲ್ಲಿ ವಿವರಿಸಲಾಗಿರುವ 31 ಸಾಧಕರ ಜೀವನನ್ನು, ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.
ಲೇಖಕ ಡಾ.ಎನ್.ಪ್ರವೀಣ್ ಚಂದ್ರ ಉಪಸ್ಥಿತರಿದ್ದರು. ಸಂಪಾದಕಿ ಡಾ.ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿ, ವಂದಿಸಿದರು. ಶಿಕ್ಷಕಿ ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿದರು.