ಶ್ರೀಲಂಕಾ ಲೇಖಕ ಶೆಹನ್ ಕರುಣತಿಲಕಗೆ ಬೂಕರ್ ಪ್ರಶಸ್ತಿ

Update: 2022-10-18 05:28 GMT
ಶೆಹನ್ ಕರುಣತಿಲಕ (AP)

ಹೊಸದಿಲ್ಲಿ: ಶ್ರೀಲಂಕಾದ ಖ್ಯಾತ ಲೇಖಕ ಶೆಹನ್ ಕರುಣತಿಲಕ (Shehan Karunatilaka) ಈ ಬಾರಿಯ ಪ್ರತಿಷ್ಠಿತ ಬೂಕರ್ (Booker) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅವರ ಎರಡನೇ ಕಾದಂಬರಿ "ದ ಸೆವೆನ್ ಮೂನ್ಸ್ ಆಫ್ ಮಾಲಿ ಅಲ್ಮೇದ" (The Seven Moons of Maali Almeida) ಈ ಗೌರವಕ್ಕೆ ಪಾತ್ರವಾಗಿದೆ. ಮೃತ ಯುದ್ಧ ಛಾಯಾಗ್ರಾಹಕನ ಸಾವಿನ ಬಳಿಕದ ಮಿಷನ್ ಈ ಕಾದಂಬರಿಯ ಕಥಾವಸ್ತು.

ರಾಣಿ ಕೆಮಿಲ್ಲಾ (Queen Consort Camilla) ಅವರಿಂದ ಕರುಣತಿಲಕ ಪ್ರಶಸ್ತಿ ಸ್ವೀಕರಿಸಿದರು. ಕರುಣತಿಲಕ 2019ರ ಬಳಿಕ ಈ ಪ್ರತಿಷ್ಠಿತ ಇಂಗ್ಲಿಷ್ ಭಾಷಾ ಸಾಹಿತ್ಯ ಪ್ರಶಸ್ತಿಯನ್ನು ವೈಯಕ್ತಿಕವಾಗಿ ಸ್ವೀಕರಿಸಿದ ಮೊದಲನೆಯವರು. ಪ್ರಶಸ್ತಿ 50 ಸಾವಿರ ಪೌಂಡ್ ನಗದು ಪ್ರಶಸ್ತಿಯನ್ನು ಒಳಗೊಂಡಿದೆ.

1990ರ ಶ್ರೀಲಂಕಾ ಅಂತರಿಕ ಯುದ್ಧದ ಸಂದರ್ಭದಲ್ಲಿ ಮೃತಪಟ್ಟ ಸಲಿಂಗಿ ಯುದ್ಧ ಛಾಯಾಗ್ರಾಹಕ ಮತ್ತು ಗ್ಯಾಂಬ್ಲರ್ ಮಾಲಿ ಅಲ್ಮೇದ ಎದ್ದು ಬರುವ ಕಥೆಯನ್ನು ಕರುಣತಿಲಕ ರಚಿಸಿದ್ದಾರೆ.

ಮಾಲಿ ಅವರಿಗೆ ಸಮಯವೇ ಪ್ರಧಾನವಾಗಿದ್ದು, ತನ್ನ ಪ್ರೀತಿಪಾತ್ರರನ್ನು ತಲುಪಲು ಹಾಗೂ ತನ್ನ ದೇಶದ ಸಂಘರ್ಷದ ಕ್ರೌರ್ಯವನ್ನು ಬಿಂಬಿಸುವ ಗುಪ್ತ ಚಿತ್ರಗಳನ್ನು ತೋರಿಸಲು ಏಳು ಚಂದ್ರರನ್ನು ದಾಟಬೇಕಿತ್ತು.

ಈ ವರ್ಷ ಬೂಕರ್ ಪ್ರಶಸ್ತಿಗೆ ಪಟ್ಟಿ ಮಾಡಲಾದ ಕೃತಿಗಳಲ್ಲಿ ಬ್ರಿಟಿಷ್ ಲೇಖಕ ಅಲೆನ್ ಗಾರ್ನೆರ್ ಅವರ "ಟ್ರಿಕಲ್ ವಾಕರ್" (British author Alan Garner's "Treacle Walker), ಜಿಂಬಾಬ್ವೆ ಲೇಖಕ ನೊವೈಲಟ್ ಬುಲವಾಯೊ ಅವರ "ಗ್ಲೋರಿ" (Zimbabwean author NoViolet Bulawayo's Glory), ಐರ್ಲೆಂಡ್ ಲೇಖಕಿ ಕ್ಲೇರ್ ಕೀಗನ್ ಅವರ "ಸ್ಮಾಲ್ ಥಿಂಗ್ಸ್ ಲೈಕ್ ದೀಸ್" (Small Things Like These" by Irish writer Claire Keegan), ಅಮೆರಿಕದ ಪರ್ಸಿವಲ್ ಎವೆರೆಟ್ ಅವರ "ದ ಟ್ರೀಸ್" (U.S. author Percival Everett's "The Trees") ಹಾಗೂ ಅಮೆರಿಕದ ಲೇಖಕಿ ಎಲಿಝಬೆತ್ ಸ್ಟ್ರಾಟ್ ಅವರ "ಓ ವಿಲಿಯಂ" ಸೇರಿದ್ದವು ( "Oh William!" by U.S. author Elizabeth Strout) ಈ ಬಗ್ಗೆ hindustantimes.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News