ವಿಟ್ಲ ಕೇಂದ್ರ ಜುಮಾ ಮಸೀದಿಗೆ ಜನರೇಟರ್ ಹಸ್ತಾಂತರ

Update: 2022-10-20 09:49 GMT

ವಿಟ್ಲ : ಕೇಂದ್ರ ಜುಮಾ ಮಸೀದಿ ಅಧೀನದ ವಿಟ್ಲ ಜಮಾಅತ್ ಯೂತ್ ವಿಂಗ್ಸ್ ವತಿಯಿಂದ ಜರಗುವ‌ ಮಾಸಿಕ ಮಜ್ಲಿಸ್ ನ್ನೂರ್ ಕಾರ್ಯಕ್ರಮದ ವಾರ್ಷಿಕ ಸಮಾರಂಭದಲ್ಲಿ ಇಸಾಕ್ ವರೈಟಿ ಅವರು ವಾಗ್ದಾನ ಮಾಡಿದ ಜನರೇಟರ್ ನ್ನು ಮಸೀದಿಗೆ  ಹಸ್ತಾಂತರಿಸಲಾಯಿತು.

ಮಸೀದಿಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಇಸಾಕ್ ವರೈಟಿ ಯವರು ಜನರೇಟರ್ ನ ಕೀಯನ್ನು ಮಸೀದಿಯ ಆಧ್ಯಕ  ಹಾಗೂ ಯುತ್ ವಿಂಗ್ಸ್ ನ ಅಧ್ಯಕ್ಷರಿಗೆ  ನೀಡಿದರು.

ಖತೀಬ್ ಮಹಮ್ಮದ್ ನಸೀಹ್ ದಾರಿಮಿ ದುವಾ ನೆರವೇರಿಸಿದರು. ಈ ಸಂದರ್ಭ ಮಸೀದಿ ಅಧ್ಯಕ್ಷ ಶೀತಲ್ ಇಕ್ಬಾಲ್, ಕಾರ್ಯದರ್ಶಿ ಹಮೀದ್ ಬದ್ರಿಯಾ, ಜತೆ ಕಾರ್ಯದರ್ಶಿ ಹಮೀದ್ ಕುರುಂಬಳ, ಕೋಶಾಧಿಕಾರಿ ಶೆರೀಫ್ ಪೊನ್ನೋಟು, ಮಾಜಿ ಅಧ್ಯಕ್ಷ ಇಬ್ರಾಹಿಂ ಏರ್ ಸೌಂಡ್ಸ್, ಅಶ್ರಫ್ ಮಹಮ್ಮದ್ ಪೊನ್ನೋಟು, ಅಬೂಬಕರ್ ಅನಿಲಕಟ್ಟೆ, ಸಮದ್ ಏರ್ ಸೌಂಡ್ಸ್, ಯುತ್ ವಿಂಗ್ಸ್ ಅಧ್ಯಕ್ಷ ರಫೀಕ್ ಪೊನ್ನೋಟು, ಉಪಾಧ್ಯಕ್ಷ ತಮೀಮ್,  ಕಾರ್ಯದರ್ಶಿ ಸಿಬಾಕ್ ಕಂಬಳಬೆಟ್ಟ, ಜತೆ ಕಾರ್ಯದರ್ಶಿ ಶಿಯಾಬ್, ಕೋಶಾಧಿಕಾರಿ ನಮೀರ್ ಹಳೆಮನೆ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News