ಮಂಗಳೂರು: ಫಿಝಾ ನೆಕ್ಸಸ್ ಮಾಲ್‌ನಲ್ಲಿ ದೀಪಾವಳಿಯ ಅಲಂಕಾರ
ಮಂಗಳೂರು: ಫಿಝಾ ನೆಕ್ಸಸ್ ಮಾಲ್‌ನಲ್ಲಿ ಆಕರ್ಷಕ ದೀಪಾವಳಿಯ ಅಲಂಕಾರ ಮಾಡಲಾಗಿದೆ. ಮಾಲ್ ಕೇಂದ್ರ ಭಾಗದಲ್ಲಿ ಇರಿಸಲಾಗಿರುವ ಹಣತೆಯ ವಿಶಿಷ್ಟ ಚಿತ್ರಣ ಮಾಲ್ ಒಳ ಪ್ರವೇಶಿಸುವವರನ್ನು ಮಂತ್ರಮುಗ್ಧಗೊಳಿಸಲಿದೆ.
ಕತ್ತಲೆಯ ಮೇಲಿನ ಬೆಳಕಿನ ವಿಜಯದ ಸಂಕೇತವಾಗಿರುವ ಈ ಹಣತೆಯ ದೀಪವು ಅದರ ನಾಲ್ಕು ಬದಿಯಲ್ಲಿ ಜ್ವಾಲೆಯ ರಚನೆ, ಅದರ ಬಣ್ಣಗಳು, ಆಮೂರ್ತ ವಿನ್ಯಾಸ ಅದನ್ನು ಮತ್ತಷ್ಟು ಭವ್ಯವಾಗಿ ಕಾಣುವಂತೆಮಾಡಿದೆ. ದೀಪಜ್ಯೋತಿಯ ಸ್ತಂಭ ಆಕರ್ಷಣೀಯವಾಗಿದೆ.
ನೆಕ್ಸಸ್ ಮಾಲ್ "ಲೈಟ್ಸ್ ಆಫ್ ಹ್ಯಾಪಿನೆಸ್" ಕ್ಯಾಂಪೇನ್ ಭಾಗವಾಗಿ ಹಬ್ಬದ ಈ ಋತುವಿನಲ್ಲಿ ಮಾಲ್‌ಗೆ ಬರುವ ಗ್ರಾಹಕರಿಗೆ ಕೊಡುಗೆಯಾಗಿ ನೀಡಲು ಈ ವೇದಿಕೆಯನ್ನು ಸಿದ್ಧಪಡಿಸಿದೆ. ಈ ಸಾಮಾಜಮುಖೀ ಕಾರ್ಯಕ್ಕೆ ಕೊಡುಗೆ ನೀಡಲು ಬಯಸುವ ಗ್ರಾಹಕರು ಸ್ಥಳದಲ್ಲೇ ಹಣತೆಗಳನ್ನು ಖರೀಸಿ, ದೀಪಸ್ತಂಭದ ಮೇಲೆ ಇರಿಸಬಹುದು. ನಂತರದಲ್ಲಿ ಈ ದೇಣಿಗೆ ನೀಡಿದ ಮೊತ್ತವನ್ನು ಅಗತ್ಯವಿರುವವರಿಗೆ ದಾನ ಮಾಡುವ ಉದ್ದೇಶದಿಂದ ಎನ್‌ಜಿಒಗೆ ಹಸ್ತಾಂತರಿಸಲಾಗುವುದು. ಆ ಮೂಲಕ "ಲೈಟ್ಸ್ ಆಫ್ ಹ್ಯಾಪಿನೆಸ್" ಎನ್ನುವುದನ್ನು ನಿಜವಾಗಿಸಲಾಗುವುದು.
ಅದ್ಭುತವಾದ ದೀಪಗಳ ಅಲಂಕಾರದ ಜತೆಗೆ ಫಿಝಾ ನೆಕ್ಸಸ್ ಮಾಲ್‌ನಲ್ಲಿ ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಶಾಪಿಂಗ್‌ನ ವಿಶಿಷ್ಟ ಅನುಭವ ನೀಡಲು ವಿಶೇಷಕೊಡುಗೆಗಳು, ಖಚಿತ ಬಹುಮಾನ ಸೇರಿದಂತೆ ಇತರ ಆಕರ್ಷಕ ಆಶ್ಚರ್ಯಗಳು ಕೈ ಬೀಸಿ ಕರೆಯುತ್ತಿವೆ. ಆದ್ದರಿಂದ ಈ ದೀಪಾವಳಿಯನ್ನು ಮಂಗಳೂರಿನ ಅತ್ಯಂತ ನೆಚ್ಚಿನ ಕುಟುಂಬ ತಾಣವಾದ ಪಾಂಡೇಶ್ವರದಲ್ಲಿರುವ ಫಿಝಾಬೈ ನೆಕ್ಸಸ್ ಮಾಲ್‌ಗೆ ಭೇಟಿ ನೀಡಿ ಆಚರಿಸಿ ಮತ್ತು ಮಾಲ್‌ನಲ್ಲಿರುವ ವಿಶೇಷ ಅಲಂಕಾರದ ನಡುವೆ ಶಾಪಿಂಗ್‌ನಲ್ಲಿ ತೊಡಗಿಸಿಕೊಂಡು ಇನ್ನೊಬ್ಬರ ಜೀವನವನ್ನೂ ಬೆಳಗಿಸುವ ಧನಾತ್ಮಕ ಅವಕಾಶ ನಿಮ್ಮದಾಗಿಸಿ ಎಂದು ಪ್ರಕಟನೆ ತಿಳಿಸಿದೆ.