ಅ.23 : ಎಸ್‍ಕೆಎಸ್‍ಎಸ್‍ಎಫ್‍ನ ವಿವಿಧ ಕಾರ್ಯಕ್ರಮಗಳ ಸಮಾರೋಪ

Update: 2022-10-21 17:27 GMT

ಪುತ್ತೂರು: ಎಸ್‍ಕೆಎಸ್‍ಎಸ್‍ಎಫ್ ದ.ಕ.ಜಿಲ್ಲಾ ಈಸ್ಟ್ ಸಮಿತಿ ಅಧೀನದಲ್ಲಿ ವಿಶ್ವ ಪ್ರವಾದಿ ಜನ್ಮ ದಿನಾಚರಣೆ ಅಂಗವಾಗಿ ಒಂದು ತಿಂಗಳುಗಳ ಕಾಲ ನಡೆದ ಕ್ಲಸ್ಟರ್ ಮತ್ತು ವಲಯ ಮಟ್ಟದ ವಿವಿಧ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಅ.23ರಂದು ಪರ್ಲಡ್ಕ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಎಸ್‍ಕೆಎಸ್‍ಎಸ್‍ಎಫ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾರಿಸ್ ಕೌಸರಿ ಕೋಲ್ಪೆ ತಿಳಿಸಿದ್ದಾರೆ.

ಅವರು ಶುಕ್ರವಾರ ಪುತ್ತೂರು ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, `ಮದೀನಾ ಪ್ಯಾಶನ್' ಎಂಬ ಹೆಸರಿನೊಂದಿಗೆ `ನ್ಯಾಯ ವಂಚಿತ ಜಗತ್ತು ನ್ಯಾಯ ನಿರ್ಭರ ಪ್ರವಾದಿ' ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುವ ಈ ಕಾಯಕ್ರಮದಲ್ಲಿ ಪರ್ಲಡ್ಕ ಜುಮಾ ಮಸಈದಿ ಅಧ್ಯಕ್ಷ ಹಾಜಿ ಅಬ್ದುಲ್ ರಝಾಕ್ ಧ್ಜಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಗ್ರಾಂಡ್ ಮೌಲಿದ್ ಮಜ್ಲಿಸ್, ಉದ್ಘಾಟನೆ, ಆಶ್ರಖ ಬೈಠಕ್, ಖವಾಲಿ, ಮಹ್ನಿಲೇ ಮದೀನ, ಗೌರವ ಸಮರ್ಪಣೆ, ನಬಿ ಮದ್ಹ್ ಹಾಡು, ಬುರ್ದಾ ಆಲಾಪಣೆ, ಮದ್ದೂರ್ರಸೂಲ್, ಪ್ರಭಾಷಣ, ಇಸ್ತಿಗ್ಫಾರ್ ಹಾಗೂ ಸಾಮೂಹಿಕ ಪ್ರಾರ್ಥನಾ ಮಜ್ಲಿಸ್ ವಿವಿಧ ಹಂತಗಳಲ್ಲಿ ನಡೆಯಲಿದೆ.

ಸಮಾರಂಭದಲ್ಲಿ ಹಲವಾರು ಸಯ್ಯಿದ್‍ಗಳು, ಉಲಮಾಗಳು ಪಾಲ್ಗೊಳ್ಳಲಿದ್ದಾರೆ. ಶೈಖುನಾ ಉಸ್ತಾದ್, ಸಯ್ಯಿದ್ ಝೈನುಲ್ ಅಬಿದೀನ್ ಜಿಫ್ರಿ ತಂಙಳ್ ಅನುಗ್ರಹ ಭಾಷಣ ಮಾಡಲಿದ್ದು, ಎಸ್‍ಕೆಎಸ್‍ಎಸ್‍ಎಫ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ, ಕೇಂದ್ರ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ಹಾಗೂ ಪರ್ಲಡ್ಕ ಖತೀಬ್ ಅಬ್ದುರ್ರಶೀದ್ ರಹ್ಮಾನಿ ಶುಭ ಹಾರೈಸಲಿದ್ದಾರೆ. ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯ ತನಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‍ಕೆಎಸ್‍ಎಫ್ ಕೇಂದ್ರ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಟ್ರೆಂಡ್ ರಾಜ್ಯ ಸಮಿತಿ ಚೇರ್‍ಮ್ಯಾನ್ ಇಕ್ಬಾಲ್ ಬಾಳಿಲ, ದ.ಕ.ಜಿಲ್ಲಾ ಉಪಾಧ್ಯಕ್ಷ ಅಬ್ದುರ್ರಶೀದ್ ರಹ್ಮಾನಿ, ಕಾರ್ಯದರ್ಶಿ ಅಶ್ರಫ್ ಮುಕ್ವೆ, ಪುತ್ತೂರು ವಲಯ ಅಧ್ಯಕ್ಷ ಬಾತಿಷಾ ಪಾಟ್ರಕೋಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News