​ಹರೇಕಳ ಹಾಜಬ್ಬರ ಶಾಲೆಯಲ್ಲಿ ಸೌರಚಾಲಿತ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

Update: 2022-10-21 17:41 GMT

ಕೊಣಾಜೆ: ದಕ ಜಿಲ್ಲೆಯ ಉಳ್ಳಾಲ ತಾಲೂಕಿನ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ದ.ಕ.ಜಿ.ಪಂ. ಪ್ರೌಡಶಾಲೆಗೆ ನಬಾರ್ಡ್ ಪ್ರಾಯೋಜಕತ್ವದ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ವತಿಯಿಂದ ಅನುಷ್ಠಾನ ಗೊಂಡಿರುವ ಸೆಲ್ಕೋ ಸಂಸ್ಥೆಯ  ಸೌರಚಾಲಿತ  ಇ ಶಾಲಾ ಸ್ಮಾರ್ಟ್ ಕ್ಲಾಸ್  ಹಾಗೂ 5 ಕೆ ಡಬ್ಲ್ಯು ಗ್ರೀಡ್ ಟೈಡ್  ಸೋಲಾರ್ ವ್ಯವಸ್ಥೆಯ ಉದ್ಘಾಟನೆ ಶುಕ್ರವಾರ ನಡೆಯಿತು.

ನಬಾರ್ಡ್ ನ‌‌‌ ಜನರಲ್ ಮ್ಯಾನೇಜರ್  ರಮೇಶ್  ಟಿ ಉದ್ಘಾಟನೆ ನೆರವೇರಿಸಿ  ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಆಧುನಿಕ ತಂತ್ರಜ್ಞಾನದ ಶೈಕ್ಷಣಿಕ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಲಿದೆ ಎಂದರು.

ದ.ಕ.ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ  ಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ  ಹರೇಕಳ ಹಾಜಬ್ಬ, ಸೆಲ್ಕೋ ಸಂಸ್ಥೆಯ ಡಿಜಿಎಂ ಗುರುಪ್ರಕಾಶ್ ಶೆಟ್ಟಿ,  ನಬಾರ್ಡ್ ಸಂಸ್ಥೆಯ ಸಂಗೀತಾ ಕರ್ತಾ ,ದ ಕ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಉಪನಿರ್ದೇಶಕರಾದ ಸುಧಾಕರ ಕೆ , ಹರೇಕಳ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬದ್ರುದ್ದೀನ್,  ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಮುಸ್ತಫಾ ಹರೇಕಳ, ಪ್ರಸಾದ್ ರೈ ಕಲ್ಲಿಮಾರ್ ಹಾಗೂ  ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News