ಭಾರತೀಯ ಮಹಿಳಾ ಒಕ್ಕೂಟ ಖಂಡನೆ
Update: 2022-10-22 14:45 GMT
ಮಂಗಳೂರು, ಅ.22: ಸಾಮಾಜಿಕ ಹೋರಾಟಗಾರ್ತಿ ಪ್ರತಿಭಾ ಕುಳಾಯಿಯ ವಿರುದ್ದ ಕಹಳೆ ನ್ಯೂಸ್‌ನ ಶ್ಯಾಮ ಸುದರ್ಶನ್ ಭಟ್ ಹೊಸಮೂಲೆ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯವಾಗಿ ಬರೆದು ತೇಜೋವಧೆ ಮಾಡಿರುವುದನ್ನು ಭಾರತೀಯ ಮಹಿಳಾ ಒಕ್ಕೂಟ (ಎನ್‌ಎಫ್‌ಐಡಬ್ಲ್ಯು) ದ.ಕ. ಜಿಲ್ಲಾ ಮಂಡಳಿಯು ತೀವ್ರವಾಗಿ ಖಂಡಿಸಿದೆ.
ಸಮಾಜದಲ್ಲಿ ಮಹಿಳೆ ಪ್ರಗತಿ ಸಾಧಿಸುವುದನ್ನು, ಅನ್ಯಾಯದ ವಿರುದ್ಧ ದನಿ ಎತ್ತುವುದನ್ನು ಮತ್ತು ಸಾಮಾಜಿಕ ರಾಜಕೀಯ ವಿಷಯಗಳ ಕುರಿತು ತನ್ನ ಸ್ವಂತ ಅಭಿಪ್ರಾಯವನ್ನು ವ್ಯಕ್ತಪಡಿಸುವುದನ್ನು ದಮನಿಸುವ ಷಡ್ಯಂತ್ರ ಈ ಸರಕಾರದಿಂದ ನಡೆಯುತ್ತಲೇ ಇದೆ. ಇಂತಹ ನೀಚ ಮನಸ್ಥಿತಿಯ ಪತ್ರಕರ್ತನ ವಿರುದ್ಧ ಪೋಲಿಸರು ಕಠಿಣ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದೆ.