ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್: ರಾಕೇಶ್ ಮಲ್ಲಿ ಆಯ್ಕೆ
Update: 2022-10-22 16:26 GMT
ಸುರತ್ಕಲ್ : ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ಚೇರ್‌ಮೆನ್ ಆಗಿ ರಾಕೇಶ್ ಮಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಕೇಶ್ ಮಲ್ಲಿಯ ನೇತೃತ್ವದ ೧೪ ಮಂದಿ ಪದಾಧಿಕಾರಿಗಳು ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಾರೆ. ಅಧ್ಯಕ್ಷರಾಗಿ ಹನುಮಂತೇ ಗೌಡ, ಉಪಾಧ್ಯಕ್ಷರಾಗಿ ರಾಜೇಂದ್ರ ಸುವರ್ಣ, ಅನಿಲ್ ಕುಮಾರ್, ಪಕ್ಕೀರ್ ಗೌಡ ಅಂತನ ಗೌಡ ಪಾಟೀಲ್, ಮಹಾದೇವಸ್ವಾಮಿ ಎಂ, ರಮಾನಂದ ಗಣಪತಿ ನಾಯ್ಕ್, ಪ್ರಧಾನ ಕಾರ್ಯದರ್ಶಿಯಾಗಿ ಮುನಿರಾಜ ಎ, ಖಜಾಂಚಿಯಾಗಿ ನಂದಕುಮಾರ್ ವೆಂಕಟಪ್ಪ ಪಾಟೀಲ್, ಜಂಟಿ ಕಾರ್ಯದರ್ಶಿಗಳಾಗಿ ಉತ್ತಪ್ಪಹೆಚ್ ಎಸ್, ನಾಗರಾಜ್ ಎಂ, ವಿಜಯ್ ಕುಮಾರ್ ಜಿ.ಸಿ, ಅಮರೇಂದ್ರ ಎ.ಎಸ್, ಮಹೇಶ್ ಬಿ.ಎನ್, ಸಂಘಟನಾ ಕಾರ್ಯದರ್ಶಿಯಾಗಿ ಸುರೇಶ್ ಬಿ.ಸಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಪವನ್ ಕುಮಾರ್ ಎಸ್ ಕಾರ್ಯನಿರ್ವಹಿಸಿದ್ದಾರೆ.